ರಾಷ್ಟ್ರೀಯ

ಪಾಕಿಸ್ತಾನವನ್ನು ವಿಶ್ವದಲ್ಲೇ ಮೂಲೆಗುಂಪು ಮಾಡಬೇಕೆಂಬ ಭಾರತ ಮೊದಲ ಪ್ರಯತ್ನ 10 ದಿನದಲ್ಲೇ ಯಶಸ್ವಿ ! ಹೇಗೆ ಎಂಬುದಕ್ಕೆ ಮುಂದಿದೆ….

Pinterest LinkedIn Tumblr

modi

ನವದೆಹಲಿ: ಪಾಕಿಸ್ತಾನವನ್ನು ವಿಶ್ವದಲ್ಲೇ ಮೂಲೆಗುಂಪು ಮಾಡಬೇಕೆಂಬ ಭಾರತ ಮೊದಲ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಿದ್ದು, ಇದೀಗ 10 ದಿನದಲ್ಲೇ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ ಏಕಾಂಗಿಯಾಗಿದೆ.

ಇಸ್ಲಾಮಾಬಾದ್‍ನಲ್ಲಿ ನವೆಂಬರ್‍ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನದಲ್ಲಿ ಮಾಲ್ಡೀವ್ಸ್ ಭಾಗವಹಿಸುವುದಿಲ್ಲ ಎಂದು ಹೇಳುವ ಮೂಲಕ ಭಾರತಕ್ಕೆ ಬೆಂಬಲ ನೀಡಿದೆ. ಹೀಗಾಗಿ ಪಾಕಿಸ್ತಾನ ನವೆಂಬರ್ 18ರಂದು ನಡೆಯಬೇಕಿದ್ದ ಸಾರ್ಕ್ ಶೃಂಗ ಸಭೆಯನ್ನು ಮುಂದೂಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಸೆ.18ರ ಉರಿಯ ಸೇನಾ ಕಚೇರಿಯ ಮೇಲಿನ ದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದನೆಯ ಮುಖವಾಡವನ್ನು ವಿಶ್ವಕ್ಕೆ ತೋರಿಸಲು ಭಾರತ ಮುಂದಾಗತೊಡಗಿತು. ಆರಂಭದಲ್ಲೇ ವಿಶ್ವಸಂಸ್ಥೆಯಲ್ಲಿ ಪಾಕಿನ ಬಣ್ಣವನ್ನು ಬಯಲು ಮಾಡಿದ ಭಾರತ ನಂತರ ಸಾರ್ಕ್ ಸಮ್ಮೇಳನಕ್ಕೆ ಬಹಿಷ್ಕಾರ ಹಾಕಿತು.

ಭಾರತದ ಈ ನಿರ್ಧಾರವನ್ನು ಬಾಂಗ್ಲಾದೇಶ, ಆಫ್ಘಾನಿಸ್ತಾನ, ಶ್ರೀಲಂಕಾ, ಭೂತನ್ ಬೆಂಬಲಿಸಿತ್ತು. ಈಗ ಮಾಲ್ಡೀವ್ಸ್ ಸಹ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದು ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ ಏಕಾಂಗಿಯಾಗಿದೆ.

ದಕ್ಷಿಣ ಏಷ್ಯಾ ದೇಶಗಳ ಪ್ರಾದೇಶಿಕ ಸಹಕಾರ ಒಕ್ಕೂಟವೇ(South Asian Association for Regional Cooperation) ಸಾರ್ಕ್. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ, ಭೂತಾನ್, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾಗಳು ಸಾರ್ಕ್‍ನ ಸದಸ್ಯ ರಾಷ್ಟ್ರಗಳಾಗಿವೆ. ವಿಶ್ವದ ಶೇ.3ರಷ್ಟು ಜನಸಂಖ್ಯೆಯನ್ನು ಮತ್ತು 2015ರ ವೇಳೆಗೆ ವಿಶ್ವದ ಆರ್ಥಿಕತೆಯ ಶೇ.9.15ರಷ್ಟು ವಹಿವಾಟನ್ನು ಹೊಂದಿದೆ. ಸಾರ್ಕ್‍ನಲ್ಲಿ ಭಾರತದ ಪ್ರಭಾವ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪಾಕ್ ಭಾರತದ ಪ್ರಸ್ತಾಪಗಳಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. 2015ರ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಸಾರ್ಕ್ ರಾಷ್ಟ್ರಗಳ ಜೊತೆ ರಸ್ತೆ ಸಂಪರ್ಕಕ್ಕೆ ಉದ್ದೇಶಿಸಿದ್ದರು. ಅಷ್ಟೇ ಅಲ್ಲದೇ ಈ ದೇಶಗಳಿಗಾಗಿಯೇ ಪ್ರತ್ಯೇಕ ಉಪಗ್ರವನ್ನು ಹಾರಿಬಿಡುವ ಯೋಜನೆಯನ್ನು ಘೋಷಿಸಿದ್ದರು. ಆದರೆ ಈ ಯೋಜನೆಗೆ ಪಾಕಿಸ್ತಾನ ಸಹಿ ಹಾಕಿರಲಿಲ್ಲ.

Comments are closed.