ರಾಷ್ಟ್ರೀಯ

ಭಾರತೀಯ ಸೇನೆಗೆ ಹೆದರಿ ಉಗ್ರರ ಕ್ಯಾಂಪ್ ಶಿಫ್ಟ್ !

Pinterest LinkedIn Tumblr

army

ನವದೆಹಲಿ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿ ಭಯೋತ್ಪಾದಕ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ನಂತರ ಪಾಕಿಸ್ತಾನಕ್ಕೆ ಅಕ್ಷರಸಹ ನಡುಕ ಪ್ರಾರಂಭವಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರ ಕ್ಯಾಂಪ್ ಗಳನ್ನು ಮುಜಾಫರಾಬಾದ್ ನಿಂದ ಆಚೆಗೆ ಸ್ಥಳಾಂತರಿಸಲು ಸಹಾಯ ಮಾಡುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ.

ಎಕನಾಮಿಕ್ ಟೈಮ್ಸ್ ನ ವರದಿಯೊಂದು ಗುಪ್ತಚರ ಇಲಾಖೆಯ ಮಾಹಿತಿಯನ್ನು ಉಲ್ಲೇಖಿಸಿದ್ದು, ಪಾಕಿಸ್ತಾನ ತಾನು ಆಕ್ರಮಿಸಿರುವ ಪ್ರದೇಶದಲ್ಲಿರುವ ಭಯೋತ್ಪಾದಕ ಕ್ಯಾಂಪ್ ಗಳನ್ನು ಹಾಗು ಭಯೋತ್ಪಾದಕರ ಜೀವ ರಕ್ಷಿಸಲು ಕ್ರಮ ಕೈಗೊಂಡಿದ್ದು ಭಯೋತ್ಪಾದಕರು ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಕಾಲ್ಕೀಳಲು ಪಾಕಿಸ್ತಾನ ನೆರವು ನೀಡುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಪಲಾಯನ ಮಾಡಲು ಸಿದ್ಧವಾಗಿರುವ ಭಯೋತ್ಪಾದಕ ಕ್ಯಾಂಪ್ ಗಳಿಗೆ ಪಿಒಕೆ ಯಿಂದ ಆಚೆ ಇರುವ ಮುಜಾಫರಾಬಾದ್ ನಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಮುರೀ ರಾವಲ್ಕೋಟ್ ಗೆ ನುಗ್ಗಿ ಸೀಮಿತ ದಾಳಿ ನಡೆಸಿದ್ದ ಭಾರತೀಯ ಯೋಧರು ಭಯೋತ್ಪಾದಕರ 7 ಲಾಂಚಿಗ್ ಪ್ಯಾಡ್( ಭಾರತದೊಳಗೆ ನುಗ್ಗಲು ಸಿದ್ಧತೆ ನಡೆಸಿರುವ ಶಿಬಿರ)ಗಳನ್ನು ನಿರ್ನಾಮ ಮಾಡಿ 38 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಯೋತ್ಪಾದಕರು ಪಿಒಕೆ ಯಲ್ಲಿರುವ ಶಿಬಿರಗಳಿಂದ ಕಾಲ್ಕಿತ್ತಿದ್ದು, ಪಾಕಿಸ್ತಾನದತ್ತ ಪಲಾಯನ ಮಾಡಿದ್ದಾರೆ ಹಾಗು ಇದಕ್ಕೆ ಪಾಕಿಸ್ತಾನ ನೆರವು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments are closed.