
ನವದೆಹಲಿ: ಪ್ರಮಾದವಶಾತ್ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರವೇಶಿಸಿದ ಭಾರತೀಯ ಯೋಧನನ್ನು ಪಾಕ್ ಸೈನಿಕರು ಬಂಧಿಸಿದ್ದಾರೆ. ಈ ಸುದ್ದಿ ತಿಳಿದ ಯೋಧನ ಅಜ್ಜಿ ಆಘಾತದಿಂದ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಧುಲೆಯ 37ನೇ ರಾಷ್ಟ್ರೀಯ ರೈಫಲ್ಸ್ನ ಯೋಧ 22 ವರ್ಷದ ಚಂದು ಬಾಬುಲಾಲ್ ಚೌಹಾಣ್ನನ್ನು ಪಾಕ್ ಸೈನಿಕರು ಸೆರೆ ಹಿಡಿದಿದ್ದಾರೆ. ಈ ವಿಷಯವನ್ನು ತಿಳಿದ ತಕ್ಷಣ ಆತನ ಅಜ್ಜಿ ಆಘಾತದಿಂದ ಮೃತಪಟ್ಟಿದ್ದಾರೆ.
ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯೋಧನ ಕುಟುಂಬಸ್ಥರೊಂದಿಗೆ ಫೋನ್ನಲ್ಲಿ ಮಾತನಾಡಿ ಧೈರ್ಯ ತುಂಬಿದ್ದಾರೆ ಮತ್ತು ಯೋಧನನ್ನು ಪಾಕ್ ವಶದಿಂದ ಬಿಡಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಚಂದು ಬಾಬುಲಾಲ್ ಗಡಿಯಲ್ಲಿ ಪಹರೆ ತಿರುಗುವಾಗ ಪ್ರಮಾದವಶಾತ್ ಗಡಿ ದಾಟಿ ಪಾಕ್ ಆಕ್ರಮಿತಿ ಕಾಶ್ಮೀರಕ್ಕೆ ಪ್ರವೇಶಿಸಿದ್ದರು. ಈ ವಿಷಯವನ್ನು ಪಾಕಿಸ್ತಾನಕ್ಕೆ ಈಗಾಗಲೇ ತಿಳಿಸಿದ್ದು, ಪಾಕ್ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸೇನೆಯ ಮೂಲಗಳು ತಿಳಿಸಿವೆ.
Comments are closed.