ರಾಷ್ಟ್ರೀಯ

ಅಶಿಸ್ತಿನ ಬದುಕಿನಿಂದ ಯುವಕರಿಗೆ ಹೃದಯಾಘಾತ

Pinterest LinkedIn Tumblr

Heart-Attackನವದೆಹಲಿ: ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಯುವಜನತೆಯಲ್ಲಿ ಹೃದಯ ಕಾಯಿಲೆಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಅಶಿಸ್ತಿನ ಜೀವನಶೈಲಿ ಮತ್ತು ಸಾಕಷ್ಟು ವ್ಯಾಯಾಮದ ಕೊರತೆ ಇದಕ್ಕೆ ಕಾರಣ ಎನ್ನುತ್ತಾರೆ ಹೃದ್ರೋಗ ತಜ್ಞರು.
ಹೃದಯ ಮತ್ತು ರಕ್ತ ನಾಳಗಳಿದೆ ಸಂಬಂಧಪಟ್ಟ ಸಮಸ್ಯೆ. ಪರಿಧಮನಿಯ ಹೃದಯ ರೋಗ, ಹೃದಯ ವೈಫಲ್ಯ, ಕಾರ್ಡಿಯೋಮಯೋಪಥಿ, ಹುಟ್ಟಿನಿಂದ ಬಂದ ಹೃದ್ರೋಗ, ಹೊರಮೈಯ ನಾಳಗಳ ಕಾಯಿಲೆ ಮತ್ತು ಸ್ಟ್ರೋಕ್ ಇತ್ಯಾದಿಗಳು ತಲೆದೋರುತ್ತವೆ.
”ಯುವಕರಲ್ಲಿ ಶೇಕಡಾ 10.5ರಷ್ಟು ಹೃದ್ರೋಗಿಗಳ ಸಂಖ್ಯೆ ನಗರ ಪ್ರದೇಶಗಳಲ್ಲಿ ಮತ್ತು ಶೇಕಡಾ 6ರಷ್ಟು ಗ್ರಾಮೀಣ ಭಾಗಗಳಲ್ಲಿ ಕಂಡುಬರುತ್ತದೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಹೃದ್ರೋಗಿಗಳ ಸಂಖ್ಯೆ ಭಾರತದಲ್ಲಿ ಶೇಕಡಾ 3ರಿಂದ 4ರಷ್ಟು ಹೆಚ್ಚು” ಎನ್ನುತ್ತಾರೆ ದೆಹಲಿ ಸಮೀಪ ಗುರಂಗಾವ್ ನ ಮೇದಾಂತ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನರೇಶ್ ಟ್ರೆಹಾನ್.
ಭಾರತದ ಮೆಟ್ರೋ ನಗರಗಳಲ್ಲಿ 25ರಿಂದ 40 ವರ್ಷದವರೆಗಿನ ಶೇಕಡಾ 7ರಷ್ಟು ಮಂದಿ ಹೃದಯ ಖಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುತ್ತದೆ ಅಂಕಿಅಂಶ.
ಎದೆ ನೋವು, ಉಸಿರಾಟದಲ್ಲಿ ತೊಂದರೆ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ.
ಶೇಕಡಾ 98ರಷ್ಟು ಭಾರತೀಯರು ಹಠಾತ್ತನೆ ಹೃದಯಾಘಾತವಾದಾಗ ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ.ಹೃದಯಾಘಾತಕ್ಕೊಳಗಾದ ಶೇಕಡಾ 60 ಮಂದಿ ಆಸ್ಪತ್ರೆಗೆ ತಲುಪುವ ಮುಂಚೆಯೇ ಮೃತಪಡುತ್ತಾರೆ.
ಭಾರತದ ಪ್ರಮುಖ 20 ನಗರಗಳಲ್ಲಿ 25ರಿಂದ 50 ವರ್ಷದೊಳಗಿನ 1 ಲಕ್ಷ ಜನರನ್ನು ಸಮೀಕ್ಷೆಗೊಳಪಡಿಸಲಾಯಿತು.

Comments are closed.