ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಅಖ್ನೂರ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಐದನೇ ಬಾರಿ ಮತ್ತು ಕಳೆದ 36 ಗಂಟೆಯಲ್ಲಿ ಮೂರು ಬಾರಿ ಪಾಕ್ ಈ ರೀತಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಪಲ್ಲನ್‍ವಾಲಾ, ಚಪ್ರಿಯಾವಾಲ್ ಮತ್ತು ಸಮ್ನಾಮ್ ಪ್ರದೇಶಗಳಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಗುಂಡಿನ ಚಕಮಕಿ ನಡೆದಿದೆ ಎಂದು ಜಮ್ಮುವಿನ ಡೆಪ್ಯುಟಿ ಕಮಿಷನರ್ ಸಿಮ್ರನ್ ದೀಪ್ ಸಿಂಗ್ ಹೇಳಿದ್ದಾರೆ.
ಗುರುವಾರ ಮಧ್ಯರಾತ್ರಿ 12.30ಗೆ ಆರಂಭವಾದ ಗುಂಡಿನ ಚಕಮಕಿ 1.30ಕ್ಕೆ ಅಂತ್ಯಗೊಂಡಿದೆ.
ಆದಾಗ್ಯೂ, ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸಿಂಗ್ ಹೇಳಿದ್ದಾರೆ.
Comments are closed.