ರಾಷ್ಟ್ರೀಯ

ರಿಲಯನ್ಸ್‌ ಜಿಯೊದೊಂದಿಗೆ ಸಮರಕ್ಕಿಳಿದ ವೊಡಾಫೋನ್‌ ! ಏನು ಆಫರ್ ನೀಡಿದೆ ನೋಡೋಣ ಬನ್ನಿ…

Pinterest LinkedIn Tumblr

vodafone

ಹೊಸದಿಲ್ಲಿ: ರಿಲಯನ್ಸ್‌ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್‌, 4ಜಿ ಮೊಬೈಲ್‌ ಬಳಕೆದಾರರಿಗಾಗಿ 1ಜಿಬಿ ಪ್ಲಾನ್‌ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದೆ.

ಹೊಸ 4ಜಿ ಸ್ಮಾರ್ಟ್‌ಫೋನ್‌ ಹೊಂದಿರುವ ವೊಡಾಫೋನ್‌ ಗ್ರಾಹಕರು, 1ಜಿ ಬಿ ಪ್ಲಾನ್‌ ರಿಚಾರ್ಜ್‌ನೊಂದಿಗೆ ಹೆಚ್ಚುವರಿ 9ಜಿಬಿಗಳನ್ನು ಪಡೆಯಲಿದ್ದಾರೆ. 2016 ಡಿಸೆಂಬರ್‌ 31ರೊಳಗೆ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಗ್ರಾಹಕರು 3ಜಿ ಅಥವಾ 4ಜಿ ಸೇವೆಯ ಈ ಆಫರ್‌ಗಳನ್ನು ಪಡೆಯಬಹುದಾಗಿದೆ.

ಈ ಆಫರ್‌ನ ಚಂದಾದಾರರು ವೊಡಾಫೋನ್‌ ಪ್ಲೇನಲ್ಲಿ ಉಚಿತವಾಗಿ ಟಿವಿ, ಚಲನಚಿತ್ರ ಹಾಗೂ ಹಾಡುಗಳನ್ನು ನೋಡಬಹುದಾಗಿದೆ. ಹೊಸ 4ಜಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಈ ಆಫರ್‌ ಲಭ್ಯವಾಗಲಿದೆ.

ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಗುಜರಾತ್‌, ಪಶ್ಚಿಮಬಂಗಾಳ, ಈಶಾನ್ಯ ರಾಜ್ಯಗಳಲ್ಲೂ 4ಜಿ ಹ್ಯಾಂಡ್‌ಸೆಟ್‌ ಬಳಕೆದಾರರಿಗೆ ಈ ಆಫರ್‌ ಲಭ್ಯವಿದ್ದು, ಅದಕ್ಕೆ ಕಾಲಮಿತಿ ವಿಧಿಸಲಾಗಿದೆ. ಚಂದಾದಾರರು 1ಜಿಬಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ರಿಚಾರ್ಜ್‌ ಮಾಡಿಸಿದರೆ ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆ ಮಾತ್ರ 9ಜಿಬಿ ಡೇಟಾ ಬಳಸಬಹುದಾಗಿದೆ.

Comments are closed.