ರಾಷ್ಟ್ರೀಯ

ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಅಧಿಕಾರಿ ಬಿಕೆ ಬನ್ಸಾಲ್ ಮತ್ತು ಪುತ್ರ ಆತ್ಮಹತ್ಯೆ

Pinterest LinkedIn Tumblr

bansal

ನವದೆಹಲಿ: ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಸಿಬಿಐ ತನಿಖೆಗೆ ಒಳಪಟ್ಟಿದ್ದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಬಿ ಕೆ ಬನ್ಸಾಲ್‌ ಅವರು ಮಂಗಳವಾರ ತಮ್ಮ ಪುತ್ರನ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿ.ಕೆ. ಬನ್ಸಾಲ್ ಮತ್ತವರ ಮಗ ಯೋಗೇಶ್ ಇಬ್ಬರೂ ತಮ್ಮ ಫ್ಲ್ಯಾಟ್’ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಬನ್ಸಾಲ್ ಅವರ ಪತ್ನಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

“ಬಿ.ಕೆ.ಬನ್ಸಾಲ್ ಮತ್ತು ಯೋಗೇಶ್ ಅವರಿಬ್ಬರೂ ಒಂದೇ ಫ್ಲಾಟ್’ನ ಬೇರೆ ಬೇರೆ ರೂಮ್’ಗಳಲ್ಲಿ ನೇಣು ಬಿಗಿದುಕೊಂಡಿದ್ದಾರೆ. ನಮಗೆ ಬೆಳಗ್ಗೆ 9:30ಕ್ಕೆ ವಿಷಯ ತಿಳಿಯಿತು. ಆದರೆ, ಅಪ್ಪ ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಡೆತ್ ನೋಟ್’ನಲ್ಲಿರುವ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ, ಜುಲೈನಲ್ಲಿ ಬಿ.ಕೆ.ಬನ್ಸಾಲ್ ಅವರ ಪತ್ನಿ ಸತ್ಯಬಾಲಾ(58) ಹಾಗೂ ಪುತ್ರಿ ನೇಹಾ(28) ಕೂಡ ಇದೇ ಅಪಾರ್ಟ್’ಮೆಂಟ್’ನಲ್ಲಿ ಪತ್ಯೇಕ ರೂಮುಗಳಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದರು.

ಸಂಸ್ಥೆಯೊಂದರಿಂದ ರು. 9 ಲಕ್ಷ ಲಂಚ ಪಡೆದ ಆರೋಪದಲ್ಲಿ ಬನ್ಸಾಲ್ ಅವರನ್ನು ಜುಲೈ 17 ರಂದು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಬನ್ಸಾಲ್‌ ಅವರ ಮನೆಯನ್ನು ಶೋಧಿಸಿದಾಗ ರು.60 ಲಕ್ಷ ನಗದು, 20 ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು ಹಾಗೂ 60 ಬ್ಯಾಂಕ್‌ ಖಾತೆ ಪುಸ್ತಕಗಳು ಸಿಕ್ಕಿದ್ದವು. ಬನ್ಸಾಲ್ ಅವರನ್ನು ಆಗಸ್ಟ್ ನಲ್ಲಿ ಜಾಮೀನು ಮೇರೆಗೆ ಬಿಡುಗಡೆ ಮಾಡಲಾಗಿತ್ತು.

Comments are closed.