ರಾಷ್ಟ್ರೀಯ

ತೀವ್ರ ಜ್ವರ, ಮಧುಮೇಹ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಜಯಲಲಿತಾ ಸಿಂಗಾಪೂರ್ ಗೆ ಶಿಫ್ಟ್

Pinterest LinkedIn Tumblr

Jayalalita-700

ಚೆನ್ನೈ: ಚೆನ್ನೈ: ಅನಾರೋಗ್ಯದಿಂದ ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ವರದಿಯಾಗಿದೆ.

ತೀವ್ರ ಜ್ವರ, ಏರಿದ ಮಧುಮೇಹ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಅವರ ಅನಾರೋಗ್ಯದಿಂದಾಗಿ ವೈದ್ಯರ ಸಲಹೆ ಮೇರೆಗೆ ಸಿಂಗಪುರ್‍ಗೆ ತೆರಳಿ ಚಿಕಿತ್ಸೆ ಪಡೆಯಲಿದ್ದಾರೆ. ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದಾಗಿ ಮೊನ್ನೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಡಯಾಬಿಟಿಸ್ ವಿಪರೀತ ಹೆಚ್ಚಾಗಿದ್ದು, ಮೂತ್ರಪಿಂಡ ಸಮಸ್ಯೆ ಇರುವುದೂ ದೃಢಪಟ್ಟಿತು. ತಜ್ಞರ ಸಲಹೆ ಮೇರೆಗೆ ಅವರು ಇಂದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರ್‍ಗೆ ಪ್ರಯಾಣ ಬೆಳೆಸಿದ್ದಾರೆ.

ಆಸ್ಪತ್ರೆ ಬಳಿ ನಿನ್ನೆಯಿಂದಲೇ ನೂರಾರು ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಸುದ್ದಿ ತಿಳಿದು ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಆಸ್ಪತ್ರೆ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Comments are closed.