ಅಂತರಾಷ್ಟ್ರೀಯ

ಅಮೆರಿಕಾ ಲಾಸ್’ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್’ನನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು

Pinterest LinkedIn Tumblr

sharukh

ಲಾಸ್ ಏಂಜಲೀಸ್: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್’ರನ್ನು ಇಮಿಗ್ರೇಶನ್ ಅಧೀಕಾರಿಗಳು ವಶಕ್ಕೆ ಪಡೆದಿರುವ ಘಟನೆ ಅಮೆರಿಕಾ ಲಾಸ್’ಏಂಜಲೀಸ್ ವಿಮಾನ ನಿಲ್ದಾಣ ನಡೆದಿದೆ. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ತಪಾಸಣೆಯ ನೆಪದಲ್ಲಿ ಅಮೆರಿಕನ್ ಅಧಿಕಾರಿಗಳು ಶಾರುಖ್ ಖಾನ್’ರನ್ನು ವಶಕ್ಕೆ ಪಡೆಯುತ್ತಿರುವುದು ಇದು ಮೊದಲ ಬಾರಿಯೇನು ಅಲ್ಲ. ಈ ಮುಂಚೆ ಏಪ್ರಿಲ್ 2012 ರಲ್ಲೂ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಅವರನ್ನು ತಪಾಸಣೆ ಕಾರಣಕ್ಕಾಗಿ ತಡೆಯಲಾಗಿತ್ತು.

ತಾನು ಭದ್ರತೆ ಹಾಗೂ ಸುರಕ್ಷತೆ ನಿಯಮಗಳನ್ನು ಗೌರವಿಸುತ್ತೇನೆ ಎಂದು ಹೇಳಿರುವ ಖಾನ್ ಅಮೆರಿಕಾದಲ್ಲಿ ಪದೇ ಪದೇ ಈ ರೀತಿ ನಡೆಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಿಂಗ್ ಖಾನ್ ಟ್ವೀಟ್ ಮಾಡಿದ್ದಾರೆ.

ಹಾಸ್ಯಕ್ಕೂ ಖ್ಯಾತರಾಗಿರುವ ಖಾನ್, ಕಾಯುವಿಕೆ ಅವಧಿಯಲ್ಲಿ ಕೆಲವು ಸುಂದರವಾದ ಪೊಕೆಮಾನ್’ಗಳನ್ನು ವಶಕ್ಕೆ ಪಡೆದಿರುವುದಾಗಿ ಟ್ವೀಟ್ ಮಾಡಿದ್ದಾರೆ.

Comments are closed.