ಅಂತರಾಷ್ಟ್ರೀಯ

518 ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿ ಬಂಧಿ

Pinterest LinkedIn Tumblr

jail

ಇಸ್ಲಾಮಾಬಾದ್: 463 ಮೀನುಗಾರರು ಸೇರಿದಂತೆ ಒಟ್ಟು 518 ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಪಾಕ್ ಶುಕ್ರವಾರ ತಿಳಿಸಿದೆ.

2008 ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಭಾರತ ಮತ್ತು ಪಾಕಿಸ್ತಾನ ವರ್ಷಕ್ಕೆ 2 ಜನವರಿ 1 ಮತ್ತು ಜುಲೈ 1 ರಂದು ಸಲ ತಮ್ಮ ರಾಷ್ಟ್ರದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಅದರ ಭಾಗವಾಗಿ ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ಕೈದಿಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ. ಇದರಲ್ಲಿ ಬಂಧಿತರಾಗಿರುವ ಮೀನುಗಾರರು ಮತ್ತು ಇತರ ನಾಗರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಪಾಕಿಸ್ತಾನದಲ್ಲಿ 463 ಮೀನುಗಾರರು ಮತ್ತು 55 ಇತರ ಭಾರತೀಯ ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಪಾಕ್ ರಾಯಭಾರ ಕಚೇರಿಗೆ ಭಾರತೀಯ ಜೈಲುಗಳಲ್ಲಿರುವ ಪಾಕ್ ಕೈದಿಗಳ ಮಾಹಿತಿ ನೀಡಿದೆ. ಅದರಂತೆ 133 ಪಾಕ್ ಮೀನುಗಾರರು ಮತ್ತು 372 ಇತರ ಕೈದಿಗಳು ಭಾರತದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದೆ.

Comments are closed.