ಮನೋರಂಜನೆ

ಅತ್ಯಾಚಾರದ ಕುರಿತು ಸಲ್ಮಾನ್ ಖಾನ್ ನೀಡಿರುವ ಹೇಳಿಕೆಗೆ ನಟಿ ರಾಕಿ ಸಾವಂತ್ ಏನು ಹೇಳಿದ್ದೇನು ಗೊತ್ತಾ…?

Pinterest LinkedIn Tumblr

sallu

ಮುಂಬೈ: ಸಲ್ಮಾನ್ ಮಹಿಳಾವಾದಿಯಾಗಿದ್ದು, ಅತ್ಯಾಚಾರದ ಕುರಿತು ನೀಚ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಅವರ ತುಟಿಗಳ ಚಲನೆಗೆ ಹೊಂದಿಕೊಳ್ಳುವಂತೆ ಧ್ವನಿಯನ್ನು ಅನುಕರಣೆ ಮಾಡಿ ಡಬ್ ಮಾಡಲಾಗಿದೆ ಎಂದು ವಿವಾದಗಳ ಮೂಲಕವೇ ಪ್ರಚಾರದಲ್ಲಿರುವ ನಟಿ ರಾಕಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಲ್ಮಾನ್ ಎಲ್ಲಿಯೂ ಮಹಿಳೆಯರಬಗ್ಗೆ ಅಪಹಾಸ್ಯ ಮಾಡಿಲ್ಲ. ಅವರ ವಿಚಾರವಾಗಿ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ದೇಶದಲ್ಲಿ ಸಲ್ಮಾನ್ ಧ್ವನಿಯನ್ನು ಅನುಕರಣೆ ಮಾಡುವವರು ಹಲವರಿದ್ದಾರೆ. ಇದರಿಂದಾಗಿ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ನಡೆಸಿದ ತುಟಿ ಚಲನೆಯನ್ನು ಆಧರಿಸಿ ಅದಕ್ಕೆ ಹಿನ್ನೆಲೆಯಲ್ಲಿ ಧ್ವನಿ ನೀಡಲಾಗಿದೆ. ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಲ್ಮಾನ್ ವಿಚಾರವಾಗಿ ಇಷ್ಟೊಂದು ದೊಡ್ಡ ವಿವಾದ ಹುಟ್ಟು ಹಾಕಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

ನಾನು ಈ ನಟನನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದು, ಒಂದು ವೇಳೆ ಸಲ್ಮಾನ್ ಖಾನ್ ಸುಲ್ತಾನ್ ಚಿತ್ರೀಕರಣದ ಅನುಭವವನ್ನು ಅತ್ಯಾಚಾರಕ್ಕೊಳಪಟ್ಟ ಮಹಿಳೆಯ ಯಾತನೆಗೆ ಹೋಲಿಸಿ ಅಪಹಾಸ್ಯ ಮಾಡಿದ್ದು ನಿಜವೇ ಆಗಿದ್ದರೆ ಸಲ್ಮಾನ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುವೆ ಎಂದು ರಾಕಿ ಸಾವಂತ್ ಎಚ್ಚರಿಸಿದ್ದಾರೆ.

ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗ ಬಾಲಿವುಡ್ ನಟನಿಗೆ ಸಮನ್ಸ್ ನೀಡಿದ್ದು, ಜುಲೈ 8ಕ್ಕೆ ಹಾಜರಾಗುವಂತೆ ಸೂಚಿಸಿದೆ.

Comments are closed.