ಮನೋರಂಜನೆ

ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ವೀಣಾ ಸಹಸ್ರಬುದ್ಧೆ ಇನ್ನಿಲ್ಲ

Pinterest LinkedIn Tumblr

Veena-Webಪುನಾ: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ, ‘ಗ್ವಾಲಿಯರ್ ಘರಾನಾ’ದಲ್ಲಿ ತಮ್ಮದೇ ಛಾಪು ಮೂಡಿಸಿದ ವೀಣಾ ಸಹಸ್ರಬುದ್ಧೆ ಗುರುವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಪತಿ, ಮಗ ಮತ್ತು ಮಗಳು ಹಾಗೂ ದೇಶಾದ್ಯಂತ ಇರುವ ಅವರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಾನ್ಪುರದಲ್ಲಿ 1948, ಸೆಪ್ಟೆಂಬರ್ 14ರಂದು ಜನಿಸಿದ ವೀಣಾ ಸಹಸ್ರೆಬುದ್ಧೆ ಅವರು ಬಾಲ್ಯದಲ್ಲಿಯೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ತಂದೆ ಪಂಡಿತ್ ಶಂಕರ್ ಶ್ರೀಪಾದ್ ಬೋಡಸ್ ಹಾಗೂ ಸೋದರ ಪಂಡಿತ್ ಕಾಶೀನಾಥ್ ಶಂಕರ್ ಬೋಡಸ್ ಅವರಿಂದ ಶಾಸ್ತ್ರೀಯ ಸಂಗೀತ ಅಧ್ಯಯನ ನಡೆಸಿದ್ದ ವೀಣಾ ಅವರು ಸಂಸ್ಕೃತ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.

ವೀಣಾ ಸಹಸ್ರಬುದ್ಧೆ ಅವರಿಗೆ 2013ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. 1984ರಿಂದ ಪುಣೆಯಲ್ಲಿಯಲ್ಲಿಯೇ ವಾಸವಿದ್ದರು.

Comments are closed.