ರಾಷ್ಟ್ರೀಯ

ಬಿಗಿಭದ್ರತೆಯ ನಡುವೆ ಅಮರನಾಥ ಯಾತ್ರೆ ಆರಂಭ

Pinterest LinkedIn Tumblr

1-Amarnath-Yatra-finalಜಮ್ಮು: ಉಗ್ರರ ದಾಳಿಯ ಭೀತಿ ಇರುವ ಹಿನ್ನೆಲೆಯಲ್ಲಿ 48 ದಿನಗಳ ಪ್ರಸಿದ್ಧ ಅಮರನಾಥ ಯಾತ್ರೆ ಬಿಗಿ ಭದ್ರತೆಯಲ್ಲಿ ಶುಕ್ರವಾರ ಪ್ರಾರಂಭಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ 1282 ಯಾತ್ರಿಗಳ ಮೊದಲ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದರು.

ಜಮ್ಮು ನಗರದ ಬಳಿಯ ಭಗವತಿ ನಗರದಲ್ಲಿ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಸ್ಥಾಪಿಸಲಾಗಿದ್ದು, 2 ದಾರಿಗಳಲ್ಲಿ ಅಮರನಾಥ ಯಾತ್ರಾರ್ಥಿಗಳು ಸಾಗಲಿದ್ದಾರೆ. ಎರಡೂ ಹಾದಿಗಳಲ್ಲಿ ಸುಮಾರು 20 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಡ್ರೋಣ್ಗಳನ್ನು ಬಳಸಿಕೊಂಡು ಭದ್ರತೆ ನೀಡಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾತ್ರೆಯನ್ನು ಆಯೋಜಿಸಲು ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳು ಸಿದ್ಧತೆ ನಡೆಸಿವೆ.

ಶುಕ್ರವಾರ ಬೆಳಗ್ಗೆ 900 ಪುರುಷರು, 225 ಮಹಿಳೆಯರು, 13 ಮಕ್ಕಳು ಮತ್ತು 144 ಸಾಧುಗಳನ್ನು ಹೊತ್ತ 33 ವಾಹನಗಳು ಸಿಆರ್ಪಿಎಫ್ ಬಿಗಿ ಭದ್ರತೆಯಲ್ಲಿ ಅಮರನಾಥ ಗುಹೆಯೆಡೆಗೆ ಪ್ರಯಾಣ ಆರಂಭಿಸಿವೆ.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗಿರುವುದರಿಂದ ಅಮರನಾಥ ಯಾತ್ರೆಗೆ ಭಾರೀ ಭದ್ರತೆ ಒದಗಿಸಲಾಗಿದೆ. 12,500 ಕೇಂದ್ರೀಯ ಭದ್ರತಾ ಪಡೆಯ ಯೋಧರು ಮತ್ತು 8,000 ರಾಜ್ಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪಹಲ್ಗಾಮ್ ಮತ್ತು ಸೋನಮಾರ್ಗ್ ಎರಡೂ ಹಾದಿಯಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಮರನಾಥ ಯಾತ್ರೆಯ ಭದ್ರತೆಯ ಕುರಿತು ಮಾಹಿತಿ ಪಡೆಯಲು ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುತ್ತಿದ್ದು, ಅಮರನಾಥ ಗುಹೆಗೆ ಭೇಟಿ ನೀಡುವ ಸಾಧ್ಯತೆ ಸಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.