ಮನೋರಂಜನೆ

IIFA ಪ್ರಶಸ್ತಿ ಪ್ರದಾನ : ದೀಪಿಕಾ ಉತ್ತಮ ನಟಿ, ರಣವೀರ್‌ಸಿಂಗ್ ಉತ್ತಮ ನಟ

Pinterest LinkedIn Tumblr

ranbeer

ಮ್ಯಾಡ್ರಿಡ್: ನಿನ್ನೆ ಇಲ್ಲಿ ನಡೆದ ಅದ್ಧೂರಿ ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ Pಆನ್ನಡತಿ ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್‌ನ ಹಲವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪಿಕು ಚಿತ್ರದ ಉತ್ತಮ ನಟನೆಗಾಗಿ ದೀಪಿಕಾ ಪಡುಕೋಣೆ, ಬಾಜಿರಾವ್ ಮಸ್ತಾನಿ ಚಿತ್ರದ ನಿರ್ದೇಶನಕ್ಕಾಗಿ ಸಂಜಯ್‌ಲೀಲಾ ಭನ್ಸಾಲಿ ಅವರು ಪ್ರಶಸ್ತಿಗೆ ಭಾಜನರಾದರು. ಭಜರಂಗಿ ಭಾಯಿಜಾನ್ ಉತ್ತಮ ಚಿತ್ರ, ಬಾಜಿರಾವ್ ಮಸ್ತಾನಿ ಚಿತ್ರದ ನಟನೆಗಾಗಿ ಉತ್ತಮ ನಟ ಪ್ರಶಸ್ತಿಗೆ ರಣವೀರ್‌ಸಿಂಗ್ ಪಾತ್ರರಾಗಿದ್ದಾರೆ.

ಬಾಜಿರಾವ್ ಮಸ್ತಾನಿಯಲ್ಲಿ ಉತ್ತಮ ಪೋಷಕ ನಟಿಯಾಗಿ ಪ್ರಿಯಾಂಕಾ ಚೋಪ್ರಾ ಪ್ರಶಸ್ತಿ ಪಡೆದರು. ಅದೇ ರೀತಿ ದಿಲ್ ದಢರ್ನೆವದೊ ಚಿತ್ರದ ಉತ್ತಮ ಪೋಷಕ ನಟ ಅನಿಲ್ ಕಪೂರ್, ಉತ್ತಮ ಕಥೆ (ಪಿಕು) ಜೂಹಿ ಚತುರ್ವೇದಿ. ಪ್ರಿಯಾಡಂಕಾ ಚೋಪ್ರಾಗೆ ವರ್ಷದ ಮಹಿಳೆ ವಿಶೇಷ ಪ್ರಶಸ್ತಿ, ಉತ್ತಮ ಉದಯೋನ್ಮುಖ ನಟ-ನಟಿಯಾಗಿ ಸೂರಜ್ ಪಂಚೋಲಿ ಮತ್ತು ಅತಿಯಾ ಶೆಟ್ಟಿ. ಎನ್‌ಹೆಚ್-10ರ ಖಳನಾಯಕನಾಗಿ ನಟಿಸಿದ ದರ್ಶನ್‌ಕುಮಾರ್ ಉತ್ತಮ ಖಳನಾಯಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ತನು ವೆಡ್ಸ್ ಮನು ಚಿತ್ರದಲ್ಲಿ ಉತ್ತಮ ಹಾಸ್ಯ ಅಭಿನಯಕ್ಕಾಗಿ ದೀಪಕ್ ದೊಬ್ರಿಯಾಲ್ ಪ್ರಶಸ್ತಿ ಪಡೆದರೆ, ಮೊದಲ ಚಿತ್ರದಲ್ಲೇ (ದಮ್‌ಲಗೇ ಹೈಸಾ) ಒಳ್ಳೆಯ ಕಲಾ ಪ್ರದರ್ಶನ ನೀಡಿದ ಭೂಮಿ ಪೆಡ್ನೇಕರ್‌ಗೆ ಪ್ರಶಸ್ತಿ ನೀಡಲಾಯಿತು. ಮೊದಲ ಚಿತ್ರದ ಉತ್ತಮ ನಟ (ಮ.ಶಾನ್) ವಿಕ್ಕಿ ಕೌಶಲ್. ಉತ್ತಮ ಹಿನ್ನೆಲೆ ಗಾಯಕಿ ಮೊನಾಲಿ ಠಾಕೂರ್, ಚಿತ್ರ ದಮ್ ಲಗಾಕೆ ಹೈಸಾ. ಹಾಡು, ಉತ್ತಮ ಹಿನ್ನೆಲೆ ಗಾಯಕ ಪಪೋನ್, ಹಾಡು- ದಮ್ ಲಗಾಕೆ ಹೈಸಾ ಚಿತ್ರದ ಮೋಹ್ ಮೋಹ್ ಕೆ ಧಾಗೆ. ಇದೇ ಚಿತ್ರದ ಗೀತ ರಚನೆಗಾಗಿ ವರುಣ್ ಗ್ರೋವರ್ ಪ್ರಶಸ್ತಿ ಪಡೆದಿದ್ದಾರೆ.

17ನೆ ಆವೃತ್ತಿಯ ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭ ಸ್ಪೇನಿನ ಮಾಡ್ರಿಡ್‌ನಲ್ಲಿ ಅದ್ಧೂರಿಯಿಂದ ನಡೆಯಿತು. ಸ್ಪೇನ್ ಮತ್ತು ಭಾರತದ ಬಾಲಿವುಡ್ ಸಂಬಂಧ 60 ವರ್ಷಗಳಷ್ಟು ಹಳೆಯದಾಗಿದ್ದು, ಚಲನ ಚಿತ್ರೋದ್ಯಮದ 150 ಮಂದಿ ಸೆಲೆಬ್ರಿಟಿಗಳು, 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಮಾರಂಭದಲ್ಲಿ ಜಮಾಯಿಸಿದ್ದರು.

Comments are closed.