ಅಂತರಾಷ್ಟ್ರೀಯ

ಲಂಡನ್​ನ ಕಾಲೇಜೊಂದರಲ್ಲಿ ಪಾಠ ಮಾಡಲಿದೆ ರೋಬಾಟ್ !

Pinterest LinkedIn Tumblr

robot

ಲಂಡನ್: ಕೈಗಾರಿಕಾ ಕಂಪನಿಗಳಿಗೆ, ಶಾಪಿಂಗ್ ಮಾಲ್ಗಳಿಗೆ ಲಗ್ಗೆ ಇಟ್ಟಿರುವ ರೋಬಾಟ್ ಇದೀಗ ಕಾಲೇಜುಗಳಲ್ಲಿ ಪಠ್ಯ ಹೇಳಲೂ ಮುಂದಾಗಿದೆ! ಲಂಡನ್ನ ಕಾಲೇಜೊಂದರಲ್ಲಿ ರೋಬಾಟನ್ನು ಉಪನ್ಯಾಸಕನನ್ನಾಗಿ ಬಳಸಿಕೊಳ್ಳಲು ನಿರ್ಧರಿಸ ಲಾಗಿದೆ. ಜಪಾನ್ನ ಸಾಫ್ಟ್ಬ್ಯಾಂಕ್ ಕಂಪನಿ ಅಭಿವೃದ್ಧಿ ಪಡಿಸಿರುವ ಮಾನವಾಕೃತಿಯ ರೋಬಾಟ್ಗೆ ಪೆಪ್ಪರ್ ಎಂದು ಹೆಸರಿಡಲಾಗಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ‘ಲಂಡನ್ ಡಿಸೈನಿಂಗ್ ಆಂಡ್ ಇಂಜಿನಿಯರಿಂಗ್ ಯುನಿವರ್ಸಿಟಿ ಟೆಕ್ನಿಕಲ್ ಕಾಲೇಜಿ’ನಲ್ಲಿ ಪಾಠ ಹೇಳಲು ಶುರುಮಾಡಲಿದೆ. ಇದರೊಂದಿಗೆ, ಮೊತ್ತಮೊದಲ ಬಾರಿಗೆ ಬ್ರಿಟನ್ನಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ರೋಬಾಟನ್ನು ಬಳಸಿದಂತಾಗಲಿದೆ.

ಭಾವನೆ ಅರ್ಥೈಸುವ ಸಾಮರ್ಥ್ಯ: ಜಪಾನ್ನಲ್ಲಿ ಈಗಾಗಲೇ ಈ ರೋಬಾಟನ್ನು ಬಳಸಲಾಗಿದ್ದು, ಮಾನವನ ಭಾವನೆಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ವಿಶೇಷ ಶಕ್ತಿ ಇದಕ್ಕಿದೆ. ಸಂವಹನ ನಡೆಸುವ ವ್ಯಕ್ತಿಗಳ ಮನೋಭಾವ ಅರಿತು ಕಾರ್ಯನಿರ್ವ ಹಿಸುವ ವಿಶ್ವದ ಮೊದಲ ರೋಬಾಟ್ ಇದು ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ರೋಬಾಟಿಕ್ ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಇದು ಪರಿಣಾಮಕಾರಿಯಾಗಲಿದೆ.

ತರಬೇತಿಯಲ್ಲಿ ನೈಪುಣ್ಯ: ಜಪಾನ್ನ ಶೋಷಿ ಪ್ರೌಢಶಾಲೆಯಲ್ಲಿ ಭಾಷಾ ಪಾಠದ ಕುರಿತು ಪೆಪ್ಪರ್ ರೋಬಾಟ್ ಈಗಾಗಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸೈ ಎನಿಸಿದೆ. ಲಂಡನ್ನ ಕಾಲೇಜಿನಲ್ಲಿ ಇದು ರೋಬಾಟಿಕ್ ಇಂಜಿನಿಯರಿಂಗ್ ಬಗ್ಗೆ ತರಬೇತಿ ನೀಡಲಿದೆ.

Comments are closed.