ರಾಷ್ಟ್ರೀಯ

ಶಸ್ತ್ರಚಿಕಿತ್ಸೆಗಾಗಿ ನೆರವು ಪಡೆದ ಬಾಲಕಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

Pinterest LinkedIn Tumblr

475617-vaishali-modi

ನವದೆಹಲಿ: ಹೃದಯ ಸರ್ಜರಿಗಾಗಿ ಹಣಕಾಸು ನೆರವು ಕೋರಿ ಪ್ರಧಾನಿ ಕಚೇರಿಗೆ ಪತ್ರ ಬರೆದು, ಸರ್ಕಾರದ ನೆರವಿನಿಂದ ಶಸ್ತ್ರಚಿಕಿತ್ಸೆ ಪಡೆದಿದ್ದ ಪುಣೆಯ 6 ವರ್ಷದ ಬಾಲಕಿ ವೈಶಾಲಿ ಹಾಗೂ ಕುಟುಂಬಸ್ಥರನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಭೇಟಿಯಾದರು.

475617-vaishali-modi1

ಆಕೆಗೆ ನೆರವು ನೀಡಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಶಸ್ತ್ರ ಚಿಕಿತ್ಸೆ ಬಳಿಕ ವೈಶಾಲಿ ಬರೆದ ಪತ್ರವು ನನ್ನ ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರಿದೆ ಎಂದು ಟ್ವೀಟರ್ನಲ್ಲಿ ತಿಳಿಸಿದ್ದಾರೆ.

ಬಡ ಕುಟುಂಬದ ಬಾಲಕಿ ವೈಶಾಲಿ ಹೃದಯ ದಲ್ಲಿ ರಂಧ್ರವೊಂದಿತ್ತು. ಅರೆಕಾಲಿಕ ಕಲಾವಿದರಾಗಿದ್ದ ಈಕೆಯ ತಂದೆ, ಮಗಳ ಶಸ್ತ್ರಚಿಕಿತ್ಸೆ ನಡೆಸುವಷ್ಟು ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ಔಷಧಕ್ಕಾಗಿ ಆಟಿಕೆ ಹಾಗೂ ಸೈಕಲ್ನ್ನು ಮಾರಿದ್ದರು. ಇದಾದ ಬಳಿಕ ವೈಶಾಲಿ, ಮನೆಯ ಆರ್ಥಿಕ ಸ್ಥಿತಿಯನ್ನು ವಿವರಿಸಿ, ಪ್ರಧಾನಿ ಕಚೇರಿಗೆ ಪತ್ರಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಪ್ರಧಾನಿ ಕಾರ್ಯಾಲಯವು ಪುಣೆಯ ಜಿಲ್ಲಾಡಳಿತದ ಮೂಲಕ ಜೂನ್ 4ರಂದು ಉಚಿತವಾಗಿ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ವೈಶಾಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.

Comments are closed.