ಅಂತರಾಷ್ಟ್ರೀಯ

ಗರ್ಭಿಣಿಯರಲ್ಲಿ ಬೆಳಗ್ಗೆ ಕಂಡುಬರುವ ವಾಕರಿಕೆ ಮತ್ತು ವಾಂತಿ​ಗೆ ಶುಂಠಿ ಉತ್ತಮ ಮದ್ದು

Pinterest LinkedIn Tumblr

Ginger

ನವದೆಹಲಿ: ಗರ್ಭಿಣಿಯರಲ್ಲಿ ಬೆಳಗ್ಗೆ ಕಂಡುಬರುವ ವಾಕರಿಕೆ ಮತ್ತು ವಾಂತಿ (ಮಾರ್ನಿಂಗ್ ಸಿಕ್ನೆಸ್) ಸಮಸ್ಯೆ ನಿವಾರಿಸುವ ಗುಣ ಶುಂಠಿಯಲ್ಲಿದೆ ಎಂದು ಬ್ರಿಟನ್ನಿನ ಸ್ತ್ರೀ ರೋಗ ತಜ್ಞರು ಮತ್ತು ಪ್ರಸೂತಿ ತಜ್ಞರ ರಾಯಲ್ ಕಾಲೇಜು ತಿಳಿಸಿದೆ.

ಈ ಕುರಿತು ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸಲಹಾ ಸಂಸ್ಥೆ ಶಿಫಾರಸು ಮಾಡಿದೆ. ಆದಾಗ್ಯೂ, ಸಮಸ್ಯೆ ಗಂಭೀರವಾಗಿದ್ದಲ್ಲಿ ಔಷಧ ಸೇವನೆ ಅನಿವಾರ್ಯ ಎನ್ನಲಾಗಿದೆ. ಗರ್ಭ ಧರಿಸಿದ ಮೊದಲ ಮೂರು ತಿಂಗಳಲ್ಲಿ ವಾಕರಿಕೆ ಮತ್ತು ವಾಂತಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಶಮನಗೊಳಿಸಲು ಔಷಧ ಬೇಡ ಎನ್ನುವವರು, ಚಿಕಿತ್ಸೆ ಪಡೆಯಲು ಇಷ್ಟವಿಲ್ಲದವರು ಶುಂಠಿ ಬಳಸಬಹುದು ಎಂದು ಆರ್ಸಿಒಜಿ ಹೇಳಿದೆ.

ಶುಂಠಿ ಉತ್ಪನ್ನಗಳನ್ನು ಔಷಧವಾಗಿ ಬಳಸಲು ಬ್ರಿಟನ್ನಿನಲ್ಲಿ ಪರವಾನಗಿ ಇಲ್ಲ. ಹೀಗಾಗಿ ಪ್ರತಿಷ್ಠಿತ ಅಥವಾ ನಂಬಲರ್ಹ ಮೂಲಗಳಿಂದ ಮಾತ್ರ ಖರೀದಿಸುವಂತೆ ಸಲಹೆ ನೀಡಲಾಗಿದೆ. ಆದರೆ, ಇದು ಪರಿಣಾಮಕಾರಿಯಾಗದಿದ್ದಲ್ಲಿ ಮತ್ತು ಸಮಸ್ಯೆ ಉಲ್ಬಣಗೊಂಡಲ್ಲಿ ತಕ್ಷಣವೇ ವೈದ್ಯರ ಸಲಹೆ, ಚಿಕಿತ್ಸೆ ಪಡೆಯಬೇಕೆಂದು ಸೂಚಿಸಲಾಗಿದೆ. ಅಜೀರ್ಣ, ಹಸಿವಿಲ್ಲದಿರುವುದು, ಶೀತ, ತಲೆನೋವು ಮತ್ತಿತರ ಆರೋಗ್ಯ ಸಮಸ್ಯೆಗಳಲ್ಲಿ ಚಿಕಿತ್ಸೆಗಾಗಿ ಶುಂಠಿಯನ್ನು ಬಳಸುವ ಪದ್ಧತಿ ಭಾರತದಲ್ಲಿ ಅಸ್ತಿತ್ವಲ್ಲಿದೆ.

Comments are closed.