ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ಓಂ ಚಿಹ್ನೆಯುಳ್ಳ ಶೂ ಮಾರಾಟ

Pinterest LinkedIn Tumblr

32

ಇಸ್ಲಾಮಾಬಾದ್: ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆಯುಳ್ಳ ಚಪ್ಪಲಿಗಳನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ಕಂಡರು ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಸಹಿಸಿಕೊಂಡು ಸಮ್ಮನಿರುವ ಸ್ಥಿತಿಯಲ್ಲಿದ್ದಾರೆ.

ಮುಸ್ಲಿಂ ಹಬ್ಬ ರಮ್ಜಾನ್ ಸಂದರ್ಭದಲ್ಲೇ ಚಪ್ಪಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಿಂಧ್ ಪ್ರಾಂತೀಯ ಸರ್ಕಾರ ಹಾಗೂ ತಾಂಡೋ ಆದಮ್ ಖಾನ್ ಪ್ರದೇಶದ ಸ್ಥಳೀಯಾಡಳಿತಾಧಿಕಾರಿಗಳಲ್ಲಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದು ಪಾಕಿಸ್ತಾನದ ಹಿಂದೂ ಪರಿಷತ್ತಿನ ಮುಖ್ಯ ಪೋಷಕರಾಗಿರುವ ರಮೇಶ್ ಕುಮಾರ್ ಹೇಳಿದ್ದಾರೆ.

ಈದ್ ಉಲ್ ಅಝಾ ಸಂದರ್ಭದಲ್ಲಿ ಹಿಂದೂಗಳ ಪವಿತ್ರ ಓಂ ಧಾರ್ಮಿಕ ಚಿಹ್ನೆ ಇರುವ ಶೂಗಳನ್ನು ಮಾರಾಟಗಾರರು ಮಾರುತ್ತಿರುವುದು ಅತ್ಯಂತ ದುರದೃಷ್ಟಕರ. ಇದರ ಸ್ಪಷ್ಟ ಉದ್ದೇಶ ಹಿಂದೂ ಬಾಂಧವರನ್ನು ಅವಮಾನಿಸುವುದೇ ಆಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Comments are closed.