
ಕೊಯಮತ್ತೂರು: ವಯಸ್ಕ ಹೆಣ್ಣಾನೆಯೊಂದು ಎಕ್ಸ್‌ಪ್ರೆಸ್ ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಘಟನೆ ಬೆಳಗ್ಗೆ ಮದುಕರೈನ ಮಾರಪಲಂನಲ್ಲಿ ಸಂಭವಿಸಿದೆ. ಎರಡು ಮರಿಗಳೂ ಸೇರಿದಂತೆ ಆರು ಆನೆಗಳ ತಂಡವೊಂದು ಇಂದು ಬೆಳಗಿನ ಜಾವ ರೈಲು ಹಳಿ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು , ಹೆಣ್ಣಾನೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಉಳಿದ 5 ಆನೆಗಳು ಅಪಾಯದಿಂದ ಪಾರಾಗಿವೆ. ಆದರೆ ಮೃತ ಆನೆಯನ್ನು ಸುತ್ತುವರಿದ ತಂಡದ ಇತರ ಆನೆಗಳು ಅರಣ್ಯ ಹಾಗೂ ರೈಲ್ವೆ ಸಿಬ್ಬಂದಿಗೆ ಮೃತದೇಹ ತೆರವುಗೊಳಿಸಲು ಅವಕಾಶ ನೀಡಲಿಲ್ಲ. ರೈಲು ಕೋಚುವೇಲಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಸುಮಾರು 5 ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸಪಟ್ಟು ಆನೆಗಳನ್ನು ಚದುರಿಸಿದರು. 2009ರಲ್ಲಿ ಇದೇ ಹಳಿ ಮೇಲೆ 4 ಆನೆಗಳು ಸಾವನ್ನಪ್ಪಿದ್ದವು.
Comments are closed.