
ಗುರಗಾಂವ್: ಇತ್ತೀಚೆಗೆ ಸೆಲ್ಫೀ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅದೇ ರೀತಿ ಸಾಯುತ್ತೇನೆಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಆತ್ಮಹತ್ಯೆಗೆ ಯತ್ನಿಸಿದ 30 ವರ್ಷದ ಟೆಕ್ಕಿಯನ್ನ ಆತನ ಸ್ನೇಹಿತರು ಮತ್ತು ಪೊಲೀಸರು ಸೇರಿ ರಕ್ಷಿಸಿದ್ದಾರೆ.
ಗುರಗಾಂವ್‍ನ ಉದ್ಯೋಗ್‍ವಿಹಾರ್ ಎಂಬ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಮಲ್ಲಿಕ್ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದರು.


ಫೇಸ್‍ಬುಕ್‍ನಲ್ಲಿ ಪೋಸ್ಟ್: ವೈಯಕ್ತಿಕ ಕಾರಣಗಳಿಂದ ನಾನು ಸಾಯಲು ಇಚ್ಛಿಸಿದ್ದು, ನನ್ನ ಜೀವವನ್ನು ತೊರೆಯುವ ವಿಚಾರ ನನಗೆ ಸಂಬಂಧಿಸಿದ್ದಾಗಿದೆ. ಯಾರೂ ಇದಕ್ಕೆ ಕಾರಣರಲ್ಲ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. ಇದರ ಜೊತೆ ತನ್ನ ಕೈಯನ್ನು ಕಟ್ ಮಾಡಿಕೊಂಡು ರಕ್ತಸ್ರಾವವಾಗುತ್ತಿರುವ ಫೋಟೋವನ್ನು ಅಪ್‍ಲೋಡ್ ಮಾಡಿದ್ದರು.
ಸ್ನೇಹಿತರಿಂದ ಎಸ್‍ಓಎಸ್ ಮೆಸೇಜ್: ವರುಣ್‍ನ ಫೇಸ್‍ಬುಕ್ ಪೋಸ್ಟ್ ನೋಡಿದ ಆತನ ಸ್ನೇಹಿತರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅಲ್ಲದೆ ವರುಣ್‍ಗೆ ಪರಿಚಯವಿದ್ದವರಿಗೆ ಎಮರ್ಜೆನ್ಸಿ(ಎಸ್‍ಓಎಸ್) ಸಂದೇಶ ರವಾನಿಸಿದ್ದರು. ಇದರಿಂದಾಗಿ ಎಲ್ಲರೂ ಸೇರಿ ವರುಣ್ ಮನೆಗೆ ಹೋದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಆತನ ಪ್ರಾಣ ಉಳಿಸಿದ್ರು.
ತಾಯಿ ಸಾವಿನಿಂದ ಖಿನ್ನತೆ: ಕೆಲ ತಿಂಗಳ ಹಿಂದೆ ವರುಣ್‍ಗೆ ಆತನ ತಾಯಿ ತನ್ನ ಕಿಡ್ನಿಯನ್ನು ನೀಡಿ ಮೃತಪಟ್ಟಿದ್ರು. ಈ ಘಟನೆಯಿಂದ ವರುಣ್ ಮಾನಸಿಕವಾಗಿ ಕುಗ್ಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವರುಣ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
Comments are closed.