ಮನೋರಂಜನೆ

ಜಿಮ್‍ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ

Pinterest LinkedIn Tumblr

Dhoni-Gym-Workout

ಹರಾರೆ: ಭಾರತ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜಿಂಬಾಬ್ವೆ ಸರಣಿ ಗೆದ್ದ ಮೇಲೆ ಇದೀಗ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದು, ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ.

ಹೌದು. ಎಂಎಸ್ ಧೋನಿ ಕ್ರಿಕೆಟ್ ಬ್ಯಾಟ್ ಬಿಟ್ಟು ಡಂಬಲ್ಸ್ ಹಿಡಿದು ಫಿಟ್‍ನೆಸ್‍ಗಾಗಿ ಬೆವರಿಳಿಸುತ್ತಿದ್ದಾರೆ. ಧೋನಿ ಜೊತೆಗೆ ತಂಡದ ಇತರೆ ಆಟಗಾರರು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದು, ಈ ವಿಡಿಯೋವನ್ನ ಬಿಸಿಸಿಐ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದೆ.

ಈಗಾಗಲೇ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿರುವ ಭಾರತಕ್ಕೆ ಇಂದಿನ ಏಕದಿನ ಪಂದ್ಯ ಅಷ್ಟೇನೂ ಮಹತ್ವವಾಗಿರದಿದ್ದರೂ, ಜಿಂಬಾಬ್ವೆ ತಂಡವನ್ನ ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸವನ್ನ ಧೋನಿ ಬಾಯ್ಸ್ ಹೊಂದಿದ್ದಾರೆ.

Comments are closed.