ರಾಷ್ಟ್ರೀಯ

ಕೋಲ್ಕತ್ತಾ ವಿವಿಯಲ್ಲಿ ಮಹಿಳೆಯರಿಗಾಗಿಯೇ ಕ್ಯಾಂಟೀನ್‍ ! ಇಲ್ಲಿ ಹುಡುಗರಿಗೆ ನೋ ಎಂಟ್ರಿ!

Pinterest LinkedIn Tumblr

calcutta-university

ಕೋಲ್ಕತ್ತಾ: ಲೇಡೀಸ್ ಕಾಲೇಜು, ಲೇಡೀಸ್ ಹಾಸ್ಟೆಲ್ ಮತ್ತು ಲೇಡೀಸ್ ಬಸ್‍ಗಳು ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಮಹಿಳೆಯರಿಗಾಗಿಯೇ ಕ್ಯಾಂಟೀನ್‍ವೊಂದನ್ನ ಉದ್ಘಾಟಿಸಲಾಗಿದೆ.

ವಿಶ್ವವಿದ್ಯಾಲಯ ಅಂದ್ಮೇಲೆ ಅಲ್ಲಿ ಯುವಕ ಯುವತಿಯರಿಬ್ಬರೂ ವ್ಯಾಸಂಗ ಮಾಡ್ತಾರೆ. ಆದ್ರೆ ಕೋಲ್ಕತ್ತಾ ವಿವಿಯ ಕ್ಯಾಂಟೀನ್‍ನಲ್ಲಿ ಯುವಕರಿಗೆ ಎಂಟ್ರಿ ಇಲ್ಲ ಅಂತಿರೋದು ಈಗ ಚರ್ಚೆಗೆ ಗ್ರಾಸವಾಗಿದೆ. 21ನೇ ಶತಮಾನದ ವಿದ್ಯಾರ್ಥಿಗಳನ್ನ 19ನೇ ಶತಮಾನಕ್ಕೆ ಕರೆದುಕೊಂಡುಹೋಗ್ತಿದ್ದೀರಾ ಅಂತ ಈ ಕ್ಯಾಂಟೀನ್‍ನ ಉದ್ಘಾಟನಾ ಸಮಾರಂಭದಲ್ಲಿ ಇಲ್ಲಿನ ಕುಲಪತಿ ಸುಗಾತಾ ಮರ್ಜಿತ್‍ಗೆ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಆದ್ರೆ ಕುಲಪತಿಗಳು ಇದಕ್ಕೆ ನೀಡೋ ಉತ್ತರವೇ ಬೇರೆ. ತೃಣಮೂಲ ಕಾಂಗ್ರೆಸ್‍ನ ವಿದ್ಯಾರ್ಥಿ ಘಟಕ ಛತ್ರ ಪರಿಷತ್‍ನ ಪ್ರಸ್ತಾವನೆ ಮೇರೆಗೆ ಮಹಿಳೆಯರ ಕ್ಯಾಂಟೀನ್ ತೆರೆಯಲಾಗಿದೆ. ಆದ್ರೆ ಅವರು ಹುಡುಗರ ಕ್ಯಾಂಟೀನ್‍ಗಾಗಿ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಹೀಗಾಗಿ ಪುರುಷರ ಕ್ಯಾಂಟೀನ್ ಇಲ್ಲ ಅಂತ ಹೇಳ್ತಾರೆ.

ಆದರೆ ಇದು ನೈತಿಕ ಪೊಲೀಸ್‍ಗಿರಿಗಾಗಿ ಮಾಡಿರುವ ತಂತ್ರ. ಯುವಕ ಯುವತಿಯರು ಒಟ್ಟಿಗೆ ಬೆರೆಯದಂತೆ ಮಾಡಲು ಹೀಗೆ ಮಾಡ್ತಿದ್ದಾರೆ ಅಂತ ಇಲ್ಲಿನ ವಿದ್ಯಾರ್ಥಿನಿಯರು ಕ್ಯಾಂಟೀನನ್ನ ಬಹಿಷ್ಕರಿಸಿದ್ದಾರೆ.

Comments are closed.