ಮನೋರಂಜನೆ

ಸೃಜನಶೀಲತೆಯನ್ನು ಕೊಂದು ಹಾಕಬೇಡಿ: ಉಡ್ತಾ ಪಂಜಾಬ್ ಚಿತ್ರದ ವಿವಾದ ಕುರಿತು ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ

Pinterest LinkedIn Tumblr

Amitabh Bachchan5

ಮುಂಬೈ: ‘ಉಡ್ತಾ ಪಂಜಾಬ್’ ಸಿನಿಮಾದಲ್ಲಿ ಕತ್ತರಿ ಪ್ರಯೋಗ ಮಾಡಿರುವ ಸೆನ್ಸಾರ್ ಮಂಡಳಿಯ ತೀರ್ಮಾನಕ್ಕೆ ಕೆಲವು ಸಿನಿಮಾ ನಿರ್ಮಾಪಕರು ಬೆಂಬಲ ನೀಡುತ್ತಿರುವುದರ ಮಧ್ಯೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ದನಿಗೂಡಿಸಿದ್ದು, ಸೃಜನಶೀಲತೆಯನ್ನು ಕೊಲ್ಲುವುದೆಂದರೆ ಕಲಾವಿದರ ಆತ್ಮವನ್ನು ಕೊಂದಂತೆ ಎಂದು ಹೇಳಿದ್ದಾರೆ.

ತಮ್ಮ ಮುಂದಿನ ಚಿತ್ರ ಟಿತ್ರಿಎನ್ ಯ ಪ್ರಚಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದನ್ನ ಅವರನ್ನು ಪತ್ರಕರ್ತರು ಉಡ್ತಾ ಪಂಜಾಬ್ ಚಿತ್ರದ ವಿವಾದ ಕುರಿತು ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

”ನನಗೆ ವಿಷಯ ಏನೆಂಬುದು ಸಂಪೂರ್ಣವಾಗಿ ತಿಳಿದಿಲ್ಲ. ಈ ಬಗ್ಗೆ ನಾನು ಇದೀಗಷ್ಟೇ ಓದುತ್ತಿದ್ದೇನೆ. ಸೃಜನಶೀಲತೆಯನ್ನು ಸಾಯಿಸಲು ಪ್ರಯತ್ನಿಸಬೇಡಿ ಎಂದಷ್ಟೇ ಹೇಳಬಲ್ಲೆ. ನೀವು ಸ್ವಂತಿಕೆ, ಸೃಜನಶೀಲತೆಯನ್ನು ಕೊಂದರೆ ಆತ್ಮವನ್ನು ಕೊಂದು ಹಾಕಿದಂತೆ. ಕಲಾವಿದರಾದ ನಮ್ಮಲ್ಲಿ ಅದೊಂದೇ ಇರುವುದು” ಎಂದರು.

” ನಿಯಮ, ನಿಬಂಧನೆಗಳು ಇರುತ್ತವೆ ಎಂದು ಗೊತ್ತು. ಅದನ್ನು ಸರ್ಕಾರ ನಿರ್ಧರಿಸಬೇಕು. ಆದರೆ ಕಲಾವಿದನಾಗಿ, ಸೃಜನಶೀಲ ವ್ಯಕ್ತಿಯಾಗಿ ಸೃಜನಶೀಲತೆಯನ್ನು ಸಾಯಿಸಬೇಡಿ ಎಂದಷ್ಟೇ ಹೇಳಬಲ್ಲೆ” ಎಂದು ಬಚ್ಚನ್ ಹೇಳಿದರು.

ಸೆನ್ಸಾರ್ ಮಂಡಳಿ ಚಿತ್ರಕ್ಕೆ 89 ಕಟ್ ಗಳನ್ನು ಹಾಕಿದ್ದು, ಪ್ರಸ್ತುತ ಸಿನಿಮಾದ ನಿರ್ಮಾಪಕರು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಸರ್ಕಾರದ ಆದೇಶದ ಪ್ರತಿಯನ್ನಾಗಲೀ, ಸೆನ್ಸಾರ್ ಮಂಡಳಿಯ ಆದೇಶದ ಪ್ರತಿಯನ್ನಾಗಲೀ ಸೆನ್ಸಾರ್ ಮಂಡಳಿ ನಮ್ಮ ಕೈಗೆ ಕೊಟ್ಟಿಲ್ಲ ಎಂದು ಚಿತ್ರದ ನಿರ್ಮಾಪಕರು ಹೈಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.
ಉಡ್ತಾ ಪಂಜಾಬ್ ಚಿತ್ರವನ್ನು ಜೂನ್ 17ರಂದು ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು.

Comments are closed.