ಕರಾವಳಿ

ಫೋಟೋ‌ಗ್ರಾಫರ್ ದರೋಡೆ ಪ್ರಕರಣ ಭೇದಿಸಿದ ಪಾಂಡೇಶ್ವರ ಪೊಲೀಸರು : ಆರೋಪಿಗಳಿಂದ1,81,500 ರೂ.ಮೌಲ್ಯದ ಸೊತ್ತು ವಶ

Pinterest LinkedIn Tumblr

Robars_Six_arset

ಮಂಗಳೂರು, ಜೂನ್.09 : ಇತ್ತೀಚಿಗೆ ನಗರದ ಪಾಂಡೇಶ್ವರ ಸಮೀಪದ ಗೂಡ್ ಶೆಡ್ಡೆ ರೈಲ್ವೇ ಟ್ರ್ಯಾಕ್ ಬಳಿ ಫೋಟೋ‌ಗ್ರಾಫರ್ ಒಬ್ಬರನ್ನು ದರೋಡೆ ಮಾಡಿದ ಆರು ಮಂದಿ ದರೋಡೆಕೋರರನ್ನು ಬುಧವಾರ ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿ, ಆರೋಪಿಗಳು ದರೋಡೆ ಮಾಡಿದ ಸುಮಾರು 70,000/-ಮೌಲ್ಯದ ಕ್ಯಾಮರಾ 18 ಗ್ರಾಂ ತೂಕದ ಸುಮಾರು 48,000/- ಮೌಲ್ಯದ ಚಿನ್ನದ ಸರ, ಸುಮಾರು 12,000/-ಮೌಲ್ಯದ ಮೊಬೈಲ್, ಮೂರು ಡೆಬಿಟ್ ಕಾರ್ಡ್ ಇದ್ದ ಪರ್ಸ್ ಹಾಗೂ ಆರೋಪಿಗಳು ದರೋಡೆಗೆ ಉಪಯೋಗಿಸಿದ ಸುಮಾರು 50,000/- ಮೌಲ್ಯದ ಸ್ಕೂಟರ್ ಸೇರಿ ಒಟ್ಟು 1,81,500/- ರೂ ಮೌಲ್ಯದ ಸೊತ್ತಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಬಂದರು ಮಿಶನ್ ಸ್ಟೀಟ್ ನಿವಾಸಿ ಸರ್ಫುದ್ದೀನ್ ( 19 ), ಫೈಸಲ್ ನಗರದ ನಿವಾಸಿ ಮಹಮ್ಮದ್ ರಂಲಾನ್ @ ಮಾಸಾ (೨೦), ಕೃಷ್ಣಾಪುರ ನಿವಾಸಿ ಶೇಕ್ ಮಹಮ್ಮದ್ ಸಫಾನ್ (19),ಸುರತ್ಕಲ್ ಕೃಷ್ಣಾಪುರದ ಮಹಮ್ಮದ್ ಆರೀಫ್ ಫೈಜಲ್ ( 19 ), ತೊಕ್ಕೊಟ್ಟು ಕಲ್ಲಾಪು ನಿವಾಸಿ ಸಲ್ಮಾನ್ ಫಾರಿಸ್ (19) ಹಾಗೂ ಮಂಗಳೂರಿನ ಫಳ್ನೀರ್ ನಿವಾಸಿ ಸಯದ್ ನಿಮಾರ್ ಹಶ್ಮಿ ( 19 ) ಬಂಧಿತ ಆರೋಪಿಗಳು.

ಜೂನ್ 5ರಂದು ಗುಣಪ್ರಸಾದ್ ರವರು ಗೂಡ್ ಶೆಡ್ಡೆಯಲ್ಲಿರುವ ಸೋಮನಾಥ ದೇವಸ್ಥಾನಕ್ಕೆ ಹೋಗಿ ವಾಪಾಸು ಸ್ಟೇಟ್ ಬ್ಯಾಂಕ್ ಕಡೆಗೆ ಗೂಡು ಶೆಡ್ಡೆ ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿರುವಾಗ ಅಲ್ಲಿದ್ದ ಮೂರು ಮಂದಿ ಹಾಗೂ ಸ್ಕೂಟರಿನಲ್ಲಿ ಬಂದ ಮೂರು ಜನ ಯುವಕರು ಒಟ್ಟು 6 ಮಂದಿ ಗುಣಪ್ರಸಾದ್ ರವರನ್ನು ಅಡ್ಡಗಟ್ಟಿ ಬಲವಂತವಾಗಿ ರೈಲ್ಪೆ ಟ್ರ್ಯಾಕ್ ಬಳಿ ಕರೆದುಕೊಂಡು ಹೋಗಿ ಎಲ್ಲರೂ ಸೇರಿ ಗುಣಪ್ರಸಾದ್ ಅವರಿಗೆ ಕೈಯಿಂದ ಹಲ್ಲೆ ಮಾಡಿ ಗುಣಪ್ರಸಾದ್ ಅವರ ಕೈಯಲ್ಲಿದ್ದ ಕ್ಯಾಮರಾ,ಕುತ್ತಿಗೆಯಲ್ಲಿದ್ದ ಚಿನ್ನದ ಸರ ಪ್ಯಾಂಟಿನ ಕಿಸೆಯಲ್ಲಿದ್ದ ಮೊಬೈಲ್ ಹಾಗೂ ನಗದು ಹಾಗೂ ಎಟಿಎಮ್ ಕಾರ್ಡ್ ಇದ್ದ ಪರ್ಸ್ ನ್ನು ದರೋಡೆ ಮಾಡಿದ್ದಾರೆ. ದರೋಡೆ ಮಾಡಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,31,500/- ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಶಾಂತರಾಮ್, ಪಿಎಸ್ಐ ಅನಂತ ಮುರ್ಡೇಶ್ವರ, ಪಿಎಸ್ಐ ಮಹಮ್ಮದ್ ಶರೀಫ್, ಸಿಬ್ಬಂದಿಗಳಾದ ಎಎಸ್ಐ ಆ.ಕೆ.ಗವಾರ್, ಯು.ಆರ್.ಡಿ,ಸೋಜಾ, ವಿಶ್ವನಾಥ, ಗಂಗಾಧರ, ಧನಂಜಯಗೌಡ, ಸತ್ಯನಾರಾಯಣ, ಶೇಖರ ಗಟ್ಟಿ, ಪುರುಷೋತ್ತಮ, ನೂತನ್ ಕುಮಾರ್, ಭೀಮಪ್ಪ, ,ಗೋಪಾಲಕೃಷ್ಣ, ಶಶಿಕುಮಾರ್ ವಿನೋದ, ಚಂದ್ರಶೇಖರರವರ್ ಪಾಲ್ಗೊಂಡಿದ್ದರು.

Comments are closed.