ಕರಾವಳಿ

ಬ್ರಹ್ಮಾವರ: ಅಕ್ರಮ ಸೀಮೆಎಣ್ಣೆ ದಾಸ್ತಾನು ಜಾಗಕ್ಕೆ ದಾಳಿ: ಸೀಮೆಎಣ್ಣೆ ವಶ, ಆರೋಪಿಗಳು ಪರಾರಿ

Pinterest LinkedIn Tumblr

ಉಡುಪಿ: ಅಕ್ರಮವಾಗಿ ಸೀಮೆಎಣ್ಣೆ ದಾಸ್ತಾನು ಮಾಡಿಟ್ಟ ಫ್ಯಾಕ್ಟರಿ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾಧಿಕಾರಿಗಳು ದಾಳಿ ನಡೆಸಿ 1ಲಕ್ಷದ 28ಸಾವಿರ ಮೌಲ್ಯದ ಸೀಮೆಎಣ್ಣೆ ವಶಕ್ಕೆ ಪಡೆದ ಘಟನೆ ವೆಸ್ಟ್ ಕೋಸ್ಟ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದಿದೆ.

Brahmavara_Illeagle_Cerossine (1) Brahmavara_Illeagle_Cerossine (2)

ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಅವರ ಮಾಹಿತಿ ಮೇರೆಗೆ ದಾಳಿ ನಡೆಸಿದ ಇಲಾಖೆ 3 ಸಾವಿರದ 220 ಲೀಟರ್ ಸೀಮೆಎಣ್ಣೆ, ಗಮ್ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಸ್ಥಳದಲ್ಲಿ ಕೆಲವು ಗಾಜಿನ ಚೂರುಗಳು ಕೂಡ ಪತ್ತೆಯಾಗಿದ್ದು ಸೋಸೈಟಿಯಲ್ಲಿ ಸಿಗುವ ನೀಲಿ ಬಣ್ಣದ ಸೀಮೆಎಣ್ಣೆಯನ್ನು ಗಮ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಬೆರೆಸಿ ಬಿಸಿ ಮಾಡುವ ಮೂಲಕ ಬಿಳಿ ಬಣ್ಣದ ಕೆರೋಸಿನ್ ತಯಾರಿಸುತ್ತಿರುವ ಕುರಿತು ಅನುಮಾನ ಮೂಡಿದ್ದು ನೀಲಿ ಬಣ್ಣದ ಸೀಮೆಎಣ್ಣೆಯನ್ನು ದುಬಾರಿ ಬೆಲೆಯ ಬಿಳಿ ಬಣ್ಣದ ಸೀಮೆಎಣ್ಣೆಯಾಗಿ ಮಾರ್ಪಾಡು ಮಾಡುವ ಕಾರ್ಯ ನಡೆಯುತ್ತಿರುವುದು ಅಧಿಕಾರಿಗಳಿಗೆ ಖಚಿತವಾಗಿದೆ.
ದಾಳಿ ನಡೆಸಿದ ಸಂಧರ್ಭ ಸೀಮೆಎಣ್ಣೆ ಮಿಶ್ರಣ ಮಾಡುತ್ತಿದ್ದ ಇಬ್ಬರು ಮಾತು ಬಾರದ ಹೊರ ಜಿಲ್ಲೆಯ ಕೆಲಸದವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಫ್ಯಾಕ್ಟರಿ ಯಾರಿಗೆ ಸೇರಿದ್ದು ಸೀಮೆಎಣ್ಣೆ ತಯಾರಿ ಯಾರ ಕೃತ್ಯ ಎಂಬುದು ತನಿಖೆಯಿಂದ ತಿಳಿದುವರಬೇಕಿದೆ. ವೆಸ್ಟ್ ಕೋಸ್ಟ್ ಕೆಮಿಕಲ್ ಫ್ಯಾಕ್ಟರಿ ಹಲವು ವರ್ಷಗಳ ಹಿಂದೆಯೇ ಮುಚ್ಚಲಾಗಿದ್ದು ಇದೀಗ ಡಾಮರು ಅಕ್ರಮವಾಗಿ ತಯಾರಿಸಲಾಗುತ್ತಿದೆ ಎಂಬುವುದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Comments are closed.