ಮುಂಬಯಿ: ಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಪ್ರೀಮಿಯರ್ ಫುಟ್ಸಾಲ್ ಲೀಗ್ (ನೂತನ ಫುಟ್ಬಾಲ್ ಲೀಗ್ ಟೂರ್ನಿಯ) ಧ್ಯೇಯ ಗೀತೆ ಹಾಡಲಿದ್ದಾರೆ.
ಟೂರ್ನಿಯ ಧ್ಯೇಯ ಗೀತೆಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್ ರೆಹಮಾನ್ ಸಂಗೀತ್ ನಿರ್ದೇಶನ ಮಾಡಿದ್ದು ವಿರಾಟ್ ಕಂಠದಾನ ಮಾಡಿದ್ದಾರೆ.
ವಿರಾಟ್ ಕೊಹ್ಲಿ, ಜುಲೈ 15 ರಂದು ಆರಂಭವಾಗಲಿರುವ ಪ್ರೀಮಿಯರ್ ಫುಟ್ಬಾಲ್ ಲೀಗ್‌ನ ರಾಯಭಾರಿಯಾಗಲಿದ್ದಾರೆ . ಚಿಕ್ಕಂದಿನಿಂದಲೂ ನಾನು ಎ.ಆರ್ ರೆಹಮಾನ್ ಅವರ ಅಭಿಮಾನಿ, ಈಗ ಅವರ ಸಂಯೋಜನೆಯ ಗೀತೆ ಹಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ವಿರಾಟ್ ಕೊಹ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ಹವಾ ಎಬ್ಬಿಸಿದಂತೆ ಹಾಡುವುದರಲ್ಲಿ ಹವಾ ಕ್ರಿಯೇಟ್ ಮಾಡಲಿದ್ದಾರೆ ಎಂದು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅಭಿಪ್ರಾಯಪಟ್ಟಿದ್ದಾರೆ.
Comments are closed.