ಮನೋರಂಜನೆ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ! ಕಾರಣ…..?

Pinterest LinkedIn Tumblr

shilpa-shetty-kundra

ಮುಂಬೈ: ಬಾಲಿವುಡ್ ಎಂಬ ರಂಗು ರಂಗಿನ ಲೋಕದಲ್ಲಿ ಸೆಲೆಬ್ರಿಟಿ ದಂಪತಿಗಳ ನಡುವೆ ಕಲಹಗಳು ಹೆಚ್ಚಾಗುತ್ತಿವೆ.ಅದಕ್ಕೆ ನಾನಾ ಕಾರಣಗಳು, ಗಂಡನ ಹೆಸರು ಮತ್ತೊಬ್ಬ ನಟಿಯ ಜೊತೆ ಥಳಕು ಹಾಕಿಕೊಂಡಿದೆ ಎನ್ನುವ ಕಾರಣಕ್ಕೆ ಇಲ್ಲ ಹೆಂಡತಿಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದಾನೆ ಎಂಬಿತ್ಯಾದಿ ಸಂಗತಿಗಳು ತಾರಾ ಜೋಡಿಗಳ ಬೇರೆ ಬೇರೆಯಾಗಲು ಕಾರಣಗಳಾಗುತ್ತಿವೆ.

ಇವುಗಳ್ಯಾವುದೂ ಇಲ್ಲದೆ ಸಣ್ಣ ಸಣ್ಣ ಸಮಸ್ಯೆಗಳಿಗೆ ದಂಪತಿಗಳು ನಾನೊಂದು ತೀರಾ ನೀ ನೊಂದು ತೀರ ಎನ್ನುವಂತೆ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ತೀರಾ ಇತ್ತೀಚೆಗೆ ಅರ್ಬಾಜ್ ಖಾನ್ ಹಾಗೂ ಮಲೈಕಾ ದಾಂಪತ್ಯದಲ್ಲಿ ಬಿರುಕು ಉಂಟಾದ ಸುದ್ದಿಯಾಗಿತ್ತು..

ಇದೀಗ ಇಂತಹದುದೇ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ.ಅದುವೇ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮನೆಗೆ ಬಾರದೆ 15 ದಿನ ಆಗಿದೆಯಂತೆ. ಮುಂಬೈನ ಬಾಂದ್ರಾದಲ್ಲಿರೋ ಅವರ ಆಫೀಸ್‌ನ್ನೆ ಮನೆಯಾಗಿಸಿಕೊಂಡು ಅಲ್ಲೇ ಇದ್ದಾರಂತೆ. ಕಳೆದ 15 ದಿನಗಳಲ್ಲಿ ಒಂದು ಬಾರಿ ಮಾತ್ರ ಮನೆಯಿಂದ ತಮ್ಮ ಬಟ್ಟೆ ತೆಗೆದುಕೊಂಡು ಹೋಗಲು ಬಂದಿದ್ದರೆಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಶಿಲ್ಪಾ ಹಾಗೂ ರಾಜ್ ದಾಂಪತ್ಯದಲ್ಲಿ ಖುಷಿ ಎನ್ನುವುದು ಮರೆಯಾಗುತ್ತಿದೆಯಂತೆ. ಕಳೆದ 15 ದಿನಗಳಿಂದ ರಾಜ್ ಕುಂದ್ರಾ ತಮ್ಮ ಮನೆಯ ಹೊಸ್ತಿಲನ್ನೂ ತುಳಿದಿಲ್ವಂತೆ. ಉದ್ಯಮಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ 2009ರಲ್ಲಿ ಸಪ್ತಪದಿ ತುಳಿದಿದ್ದರು. ಈ ದಂಪತಿಗಳಿಗೆ ವಿಯಾನ್ ಎಂಬ ಪುತ್ರನಿದ್ದಾನೆ. ಅಷ್ಟಕ್ಕೂ ರಾಜ್ ಈ ತರಹ ಯಾಕೆ ಮಾಡ್ತಿದಾರೆ ಅನ್ನೋದು ಇನ್ನೂ ಗೊತ್ತಾಗಬೇಕಿದೆ.

ರಾಜ್‌ಕುಂದ್ರಾ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯನ್ನು ವರಿಸಿದ್ದರು.ಇದೀಗ ಇವರ ಬಾಳಿನಲ್ಲಿ ಬಿರುಗಾಳಿ ಬೀಸಿದೆ ಎಂದು ಬಾಲಿವುಡ್ ಅಂಗಳದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

Comments are closed.