ಕರ್ನಾಟಕ

ಈ ತಿಂಗಳ ಕೊನೆಯಲ್ಲಿ ತೆರೆಯ ಮೇಲೆ ಬರಲಿದೆ ಕೋಮಲ್ ನ “ಡೀಲ್‌ರಾಜ”

Pinterest LinkedIn Tumblr

komal

“ಪುಟ್ಟಣ್ಣ”ಚಿತ್ರದ ಬಳಿಕ ನಟ ಕೋಮಲ್ ಕುಮಾರ್ ಈಗ “ಡೀಲ್‌ರಾಜ”ನಾಗಿದ್ದಾರೆ. ಅದಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಅಂದಹಾಗೆ “ಡೀಲ್‌ರಾಜ” ಕೋಮಲ್ ಅಭಿನಯದ ಹೊಸ ಚಿತ್ರ ಇದು. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರೈಸಿದ್ದು ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ತಿಂಗಳ ಕೊನೆಯಲ್ಲಿ ತೆರೆಯ ಮೇಲೆ ಬರಲಿದೆ.ಕೋಮಲ್‌ಗೆ ನಾಯಕಿಯಾಗಿ ತೆಲುಗಿನ ಹುಡುಗಿ ಭಾನುಶ್ರೀ ಮೆಹ್ರಾ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಕೆ.ಮೂರ್ತಿ, ರವಿಚಂದ್ರ ರೆಡ್ಡಿ, ಶ್ರೀಕಾಂತ್ ಸೇರಿದಂತೆ ನಾಲ್ಕು ಮಂದಿ ಸ್ನೇಹಿತರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ರಾಜ್‌ಗೋಪಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ.

ನಟ ಕೋಮಲ್,ಎಲ್ಲರೂ ನನ್ನ ಬಾಡಿ ಲ್ಯಾಂಗ್ವೇಜ್ ಚೆನ್ನಾಗಿದೆ ಎನ್ನುತ್ತಿದ್ದರು ಆದರೆ ಬಾಡಿಯ ವಿಷಯ ಬಂದಾಗ ಸರಿಯಿಲ್ಲ ಎನ್ನುತ್ತಿದ್ದರು ಇದರಿಂದಾಗಿ ಕಳೆದ ನಾಲ್ಕು ತಿಂಗಳ ಸತತ ಪರಿಶ್ರಮದಿಂದ ಸಣ್ಣಗಾಗಿದ್ದೇನೆ. ಡೀಲ್‌ರಾಜ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಚಿತ್ರವನ್ನು ಇನ್ನೂ ನೋಡಿಲ್ಲ.ನೋಡಿದವರೆಲ್ಲಾ ಚೆನ್ನಾಗಿ ಬಂದಿದೆ ಎನ್ನುತ್ತಿದ್ದಾರೆ.

ಚಿತ್ರದಲ್ಲಿ ಹೊಟ್ಟೆ ಪಾಡಿಗಾಗಿ ಡೀಲ್ ಮಾಡಿ ಬದುಕುವ ಪಾತ್ರ ಇದೇ ವೇಳೆ ಒಳ್ಳೆಯ ಉದ್ದೇಶಕ್ಕೂ ಆತ ಡೀಲ್ ಮಾಡುತ್ತಾನೆ ಅದು ಏನು ಎನ್ನುವುದು ಚಿತ್ರದ ತಿರುಳು.ಸಿನಿಮಾ ರಿಚ್ ಆಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ರಾಜ್‌ಗೋಪಿ,ಜೀವನದಲ್ಲಿ ಸಣ್ಣ ಪುಟ್ಟ ಡೀಲ್ ಮಾಡಿಕೊಂಡಿದ್ದವ್ಯಕ್ತಿಗೆ ಸಿಕ್ಕ ಡೀಲ್‌ನಿಂದ ಆತನ ಜೀವನವೇ ಬದಲಾಗುತ್ತದೆ. ಇಂತಹದೊಂದು ಎಳೆಗೆ ಹಾಸ್ಯದ ಲೇಪನ ಹಚ್ಚಿ ಚಿತ್ರವನ್ನು ಬೆಂಗಳೂರು ಸುತ್ತಮತ್ತ,ಶ್ರೀಲಂಕದಲ್ಲಿ ಕೂಡ ಚಿತ್ರೀಕರಣ ಮಾಡಲಾಗಿದೆ.ನಿರ್ಮಾಪಕರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ವಿವರ ನೀಡಿದರು.

ಚಿತ್ರದಲ್ಲಿ ಅವಿನಾಶ್, ಸುಮನ್ ರಂಗನಾಥ್, ಜೈ ಜಗದೀಶ್ ಸೇರಿದಂತೆ ಅನೇಕ ಕಲಾವಿದರ ದಂಡೇ ಇದೆ ಎಂದು ಮಾಹಿತಿ ನೀಡಿದರು.

ನಟಿ ಭಾನುಶ್ರೀ, ಕನ್ನಡದಲ್ಲಿ ಮೊದಲ ಚಿತ್ರ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನನ್ನದು ಮಹಿಳಾ ಪೊಲೀಸ್ ಪೇದೆಯ ಪಾತ್ರ. ಜತೆಗೆ ಗ್ಲಾಮರ್‌ನಲ್ಲಿಯೂ ಕಾಣಿಸಿಕೊಂಡಿದ್ದೇನೆ ಎರಡು ರೀತಿಯ ಪಾತ್ರಗಳಿವೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದರು.

ಸಂಗೀತ ನಿರ್ದೇಶಕ ಅಭಿಮಾನ್ ರಾಯ್, ಚಿತ್ರದಲ್ಲಿ ಐದು ಹಾಡುಗಳಿವೆ ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿ ಬಂದಿವೆ ಇನ್ನೂ ನಿಮ್ಮಗಳ ಸಹಕಾರ ಮತ್ತು ಬೆಂಬಲ ಅಗತ್ಯ ಎಂದು ಕೇಳಿಕೊಂಡರು.

ನಿರ್ಮಾಪಕರಾದ ರವಿಚಂದ್ರ ರೆಡ್ಡಿ, ಕೆ.ಮೂರ್ತಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಮೊದಲ ಪ್ರಯತ್ನ ಸ್ನೇಹಿತರು ಸೇರಿಕೊಂಡು ಬಂಡವಾಳ ಹಾಕಿದ್ದೇವೆ.ಒಳ್ಳೆಯ ಚಿತ್ರ ಮಾಡುವ ಉದ್ದೇಶ ನಮ್ಮದು ಎಂದು ವಿವರ ನೀಡಿದರು. ಝೇಕಾಂರ್ ಸಂಸ್ಥೆಯಿಂದ ಚಿತ್ರದ ಧ್ವನಿ ಸುರುಳಿ ಹೊರತರಲಾಗಿದೆ. ಆ ಸಂಸ್ಥೆಯ ಭರತ್ ಜೈನ್ ಇದ್ದರು.

Comments are closed.