ಕರ್ನಾಟಕ

ಗಿನ್ನಿಸ್ ಪುಸ್ತಕದಲ್ಲಿ ನಮೂದಾಗಲು ಸಜ್ಜಾಗಿದೆ ’ಬರ್ತ್’ ಚಿತ್ರ

Pinterest LinkedIn Tumblr

Birth film

ಈವಾರ ಬಿಡುಗಡೆಯಾಗಿರುವ ’ಬರ್ತ್’ ಸಿನಿಮಾ ಗಿನ್ನಿಸ್ ಪುಸ್ತಕದಲ್ಲಿ ನಮೂದಾಗಲು ಸಜ್ಜಾಗಿದೆ. ಸನ್ನಿವೇಶದಲ್ಲಿ ನಾಯಕ, ನಾಯಕಿ ಲಿಪ್‌ಮೂವ್‌ಮೆಂಟ್ ಇರುವುದಿಲ್ಲ. ಸಂಭಾಷಣೆಗಳು ಅವರ ಮನಸ್ಸಿನ ಭಾವನೆಗಳಿಂದ ಹೊರಬರುತ್ತದೆ. ಎದುರುಗಿರುವ ನಟರಿಗೆ ಕೇಳಿಸದೆ, ಪ್ರೇಕ್ಷಕನಿಗೆ ಅರ್ಥವಾಗುತ್ತದೆ. ಇಂತಹ ಹೊಸ ಪ್ರಯತ್ನವನ್ನು ಇಲ್ಲಿಯವರೆಗೂ ಯಾರು ಮಾಡಿಲ್ಲ ಇದು ಗಿನ್ನಿಸ್ ದಾಖಲೆಗೆ ಸೇರಲಿದೆ ಎನ್ನುತ್ತಾರೆ ನಿರ್ದೇಶಕ ಶಿವ ಹೊಳಲು.

ಚಿತ್ರದಲ್ಲಿ ಬುಡಕಟ್ಟು ಜನಾಂಗ, ಹರಿಜನರ ಎರಡು ಗುಂಪುಗಳು ತಾನು ಅಧಿಪತಿಯಾಗಬೇಕೆಂದು ಬಯಸುತ್ತಾರೆ. ಇದರಲ್ಲಿ ನಾಯಕ, ಖಳನಟನ ನಡುವೆ ಪೈಪೋಟಿ ನಡೆದು ಅಂತಿಮವಾಗಿ ಯಾರು ಗೆಲುವು ಸಾಧಿಸುತ್ತಾರೆ ಎನ್ನುವುದು ಬರ್ತ್ ಚಿತ್ರದ ಕತೆಯ ತಿರುಳು ಎನ್ನುತ್ತಾರೆ.

ಚಿತ್ರದ ಕತೆ, ಸಾಹಿತ್ಯ, ನಿರ್ದೇಶನದ ಜವಾಬ್ದಾರಿಯನ್ನು ಮೊದಲಬಾರಿ ಹೊತ್ತುಕೊಂಡಿರುವುದು ಶಿವ ಹೊಳಲು ಬರ್ತ್ ಬಗ್ಗೆ ಆಪಾರ ನಿರೀಕ್ಷೆಯಿಟ್ಟುಕೊಂಡು ಅಷ್ಟೇ ಪರಿಶ್ರಮ ವಹಿಸಿ ಚಿತ್ರ ಮಾಡಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಸಂಗೀತ ನಿರ್ದೇಶಕ ಬಿ.ಆರ್.ಶಂಕರ್‌ಗೆ ಸ್ವಗತದಲ್ಲಿ ಸಂಭಾಷಣೆಗಳು ಬರುವುದರಿಂದ ಹಿನ್ನಲೆ ಸಂಗೀತ ಒದಗಿಸಿರುವುದು ಸವಾಲಾಗಿದೆ ಎಂದು ಹೇಳಿಕೊಂಡರು.

ತಾವರೆಕೆರೆ ಭೂತಬಂಗ್ಲೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ಶ್ರೀಕಿ ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ರೀ ಬರ್ತ್ ಆಗಬಹುದು ಅಂತ ನಂಬಿದ್ದಾರೆ. ಅದೇ ರೀತಿ ನಾಯಕಿ ದುನಿಯಾ ರಶ್ಮಿ ಕೂಡ ಅದೇ ದಾರಿಯಲ್ಲಿ ಕನಸು ಕಾಣುತ್ತಿದ್ದಾರೆ.

೪೭೬ ಚಿತ್ರಗಳಿಗೆ ಸಾಹಸ ದೃಶ್ಯಗಳನ್ನು ಸಂಯೋಜಿಸಿರುವ ಢಿಫರೆಂಟ್‌ಡ್ಯಾನಿ ಒಂದು ಫೈಟ್‌ನಲ್ಲಿ ಕಲಾವಿದರ ಕೈ,ಕಾಲು ಬಳಸದೆ ಆಯುಧದಿಂದ ಸಾಹಸ ದೃಶ್ಯವನ್ನು ಸಂಯೋಜಿಸಿರುವುದು ವಿಶೇಷವಾಗಿದೆ. ಮತ್ತೊಂದು ಸನ್ನಿವೇಶದಲ್ಲಿ ನಾಯಕಿ ಡ್ಯೂಪ್ ಬಳಸದೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರಂತೆ.

“ಪ್ರಾಣಿಗಳಿಗೆ ನಾಳಿನ ಬಗ್ಗೆ ಚಿಂತೆ ಇರುವುದಿಲ್ಲ. ಮನುಷ್ಯನಾದವನು ಸ್ವಾರ್ಥಿಯಾದಾಗ ದೇಶ, ಭಾಷೆ ಬಗ್ಗೆ ಜಗಳವಾಗುತ್ತದೆ. ಇದು ಬೇಡ, ಹುಟ್ಟನ್ನು ಸಾರ್ಥಕ ಮಾಡಿಕೊಳ್ಳೋಣ” ಎಂಬ ಸಂದೇಶವನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದಾರೆ. ನಿರ್ಮಾಪಕರ ಪುತ್ರ ಧನುಷ್ ಕುರುಡನಾಗಿ, ತೇಜಸ್ ಖಳನಟನ ಮಗನಾಗಿ ಅಭಿನಯಿಸಿದ್ದಾರೆ.

ರಿಯಲ್ ಎಸ್ಟೇಟ್ ನಡೆಸುತ್ತಿರುವ ಚಂದ್ರಶೇಖರ್ ಮುಖ್ಯ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸಾರ್ವತ್ರಿಕ ಕಥೆ ಹೊಂದಿರುವ ಚಿತ್ರವಾಗಿರುವುದರಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗೂ ಡಬ್ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. ಜೂನ್ ಮೊದಲ ವಾರದಂದು ಸುಮಾರು ೭೦ ಕೇಂದ್ರಗಳಲ್ಲಿ ಚಿತ್ರ ತೆರೆಕಂಡಿದೆ.

Comments are closed.