ಕರ್ನಾಟಕ

ಸೆಟ್ಟೇರಿದ ಹೊಸಬರ ಹಾರರ್ ಥ್ರಿಲ್ಲರ್‌ನ ಸಿನಿಮಾ “ಹಗೆ”

Pinterest LinkedIn Tumblr

Hage film

ಹೊಸಬರ ಹಾರರ್ ಥ್ರಿಲ್ಲರ್‌ನ ಸಿನಿಮಾ “ಹಗೆ” ಸೆಟ್ಟೇರಿದೆ. ಮೋಹನ್ ದಾಸ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಲಕ್ಷ್ಮಿ ನಾರಾಯಣ ರಾಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದು ಅವರಿಗೆ ಮೊದಲ ಚಿತ್ರ.

ನಾಯಕ ಸುಕೃತ್ ಹಾಗು ನಾಯಕಿ ಸುಕೃತಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಲ್ಲಿ ನಾಯಕಿ ಸುಕೃತಾ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಿಂದ ಅವರಿಗೆ ಹಿರಿತೆರೆಗೆ ಭಡ್ತಿ ಸಿಕ್ಕಿದೆ. ಚಿತ್ರದ ನಾಯಕ ನಾಯಕಿಯರ ಹೆಸರು ಒಂದೇ ರೀತಿ ಇದೆ.

ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮಹೂರ್ತವಿತ್ತು. ಬಳಿಕ ಚಿತ್ರತಂಡ ಮಾತಿಗೆ ಇಳಿಯಿತು ಮೊದಲು ಮಾತು ಆರಂಬಿಸಿದ ನಿರ್ದೇಶಕ ಮೋಹನ್ ದಾಸ್, ಇದೊಂದು ಸಸ್ಪೆನ್ಸ್ ಸಿನಿಮಾ ಹೆಚ್ಚಾಗಿ ಹಾರರ್ ಮತ್ತು ಥ್ರಿಲ್ಲರ್‌ನಿಂದ ಕೂಡಿದೆ.” ಹಗೆ” ಎಂದರೆ ಸಾಮಾನ್ಯವಾಗಿ ಎಲ್ಲರೂ ದ್ವೇಷ, ಇನ್ನೊಬ್ಬರ ಮೇಲೆ ಹಗೆತನ ಸಾಧಿಸುವುದು ಎಂದು ಎಲ್ಲರೂ ನಂಬಿ ಬಿಡುತ್ತಾರೆ.

ಆದರೆ “ಹಗೆ” ಪದಕ್ಕೆ ಚಿತ್ರದಲ್ಲಿ ಬೇರೆ ರೀತಿಯ ಅರ್ಥ ನೀಡಲಾಗಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋದಬೇಕು. ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಚಿತ್ರ ಕೈಗೆತ್ತಿಕೊಂಡಿದ್ದೇವೆ.ಇದಕ್ಕೆ ನಿರ್ಮಾಪಕರೂ ಕೂಡ ಪೂರ್ಣ ಸಹಕಾರ ಮತ್ತು ಬೆಂಬಲ ನೀಡಿದ್ದಾರೆ. ೩೫ ದಿನಗಳ ಕಾಲ ಎಡರು ಶೆಡ್ಯೂಲ್ಡ್‌ಗಳಲ್ಲಿ ಚಿತ್ರವನ್ನೂ ಚಿತ್ರೀಕರಿಸುವ ಉದ್ದೇಶವೊಂದಲಾಗಿದೆ ಹೊಸ ತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ನಿರ್ಮಾಪಕ ಲಕ್ಷ್ಮಿನಾರಾಯಣ ರಾಜು, ಮೊದಲಿನಿಂದಲೂ ಚಿತ್ರ ನಿರ್ಮಾಣ ಮಾಡುವ ಆಸೆ ಇತ್ತು ಅದು ಈಗ ಕೈಗೂಡಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದೇವೆ.ಒಳ್ಳೆಯ ಕಥೆ ಇರುವುದರಿಂದ ಉತ್ತಮ ಚಿತ್ರವಾಗಲಿದೆ ಎನ್ನುವ ನಂಬಿಕೆ ಇದೆ. ಚಿತ್ರಕ್ಕೆ ಏನು ಬೇಕೋ ಅದನ್ನು ಒದಗಿಸುವ ಭರವಸೆ ನೀಡಿದರು.

ನಾಯಕ ಸುಕೃತ್, ಇದು ಮೊದಲ ಚಿತ್ರ. ಸ್ಲಂನಲ್ಲಿ ಬೆಳೆಯುವ ಹುಡುಗನ ಕಥೆ,ಹಾರರ್ ಮತ್ತು ಸಸ್ಪೆನ್ಸ್ ನಿಂದ ಕೂಡಿರುವುದರಿಂದ ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ. ಎಲ್ಲರಿಗೂ ಚಿತ್ರ ಇಡಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕಿ ಸುಕೃತಾ, ಕಿರುತೆರೆಯಲ್ಲಿ ಇಲ್ಲಿಯವರೆಗೆ ನಟಿಸುತ್ತಿದ್ದೆ. ಈಗ ಹಿರಿತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ.ಮೊದಲ ಬಾರಿಗೆ ನಾಐಕಿಯಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು,ಅವರು ಪೂರ ಕಥೆ ಹೇಳಿಲ್ಲ ಹಾಗಾಗಿ ನನ್ನ ಪಾತ್ರ ಬಿಟ್ಟು ಉಳಿದ ಕಥೆ ಗೊತ್ತಿಲ್ಲ. ಒಳ್ಳೆಯ ಕಥೆ ಇರುವುದರಿಂದ ಉತ್ತಮ ಚಿತ್ರಚವಾಗಲಿದೆ ಎಂದರು.

ಗಾಯಕ ಚೇತನ್ ಮೊದಲ ಬಾರಿಗೆ ಸಂಗೀತ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

Comments are closed.