ರಾಷ್ಟ್ರೀಯ

ಅಪಹರಣಕ್ಕೊಳಗಾದ ಎಂಟು ವರ್ಷದ ಬಾಲಕಿ ಅತ್ಯಾಚಾರಿಯಿಂದ ತಪ್ಪಿಸಿಕೊಂಡದ್ದು ಹೇಗೆ ಗೊತ್ತಾ…?

Pinterest LinkedIn Tumblr

rape

ನವದೆಹಲಿ: ಅಪಹರಣಗೊಂಡು ಅತ್ಯಾಚಾರಕ್ಕೆ ಒಳಗಾದ ಎಂಟು ವರ್ಷದ ಬಾಲಕಿ ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳಲು ಸತ್ತಂತೆ ಬಿದ್ದುಕೊಂಡು ಪ್ರಾಣಉಳಿಸಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿ ಹೊರವಲಯದ ಕಿರಾರಿ ಎಂಬ ಪ್ರದೇಶದಲ್ಲಿ ಕಳೆದ ಶನಿವಾರ ಎಂಟು ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಶನಿವಾರ ರಾತ್ರಿ ಹುಡುಗಿಯು ಮನೆ ಜಗಲಿಯಲ್ಲಿನ ಮಂಚದ ಮೇಲೆ ಮಲಗಿಕೊಂಡಿದ್ದಳು. ಭಾನುವಾರ ನಸುಕಿನ ಸುಮಾರು 1.30ರ ವೇಳೆಗೆ ಎಚ್ಚರಗೊಂಡ ಬಾಲಕಿಗೆ ತಾನು ತನ್ನ ಮನೆಯ ಜಗಲಿಯಲ್ಲಿ ಇಲ್ಲದೆ, ಅಪರಿಚಿತ ವ್ಯಕ್ತಿಯ ಜತೆಗೆ ಬೇರೆಲ್ಲೊ ಇರುವುದು ಅನುಭವಕ್ಕೆ ಬಂತು. ಭಯದಿಂದ ಬಾಲಕಿ ಚೀರಲು ಯತ್ನಿಸಿದಾಗ ಆತ ತನ್ನ ಕೈಯಿಂದ ಆಕೆಯ ಬಾಯಿಯನ್ನು ಬಲವಾಗಿ ಮುಚ್ಚಿ ಗಟ್ಟಿಯಾಗಿ ಒತ್ತಿ ಹಿಡಿದುಕೊಂಡ.

ಬಳಿಕ ಬಾಲಕಿಯನ್ನು ಆತ ಅಲ್ಲೇ ಹತ್ತಿರ ತೆರೆದ ಜಾಗವೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಅತ್ಯಾಚಾರದ ಬಳಿಕ ಆತ ತನ್ನನ್ನು ಕೊಂದು ಹಾಕಬಹುದೆಂಬ ಶಂಕೆಯಲ್ಲಿ ಬಾಲಕಿಯು ಸತ್ತಂತೆ ಬಿದ್ದುಕೊಂಡು ಪ್ರಾಣ ರಕ್ಷಿಸಿಕೊಳ್ಳುವ ಉಪಾಯ ಮಾಡಿದಳು.

ಬಾಲಕಿ ನಿಜಕ್ಕೂ ಸತ್ತಿರುವಳೇ ಇಲ್ಲವೇ ಎಂದು ತಿಳಿಯಲು ಆ ಅತ್ಯಾಚಾರಿ ಆಗ ಆಕೆಗೆ ಅಲ್ಲಲ್ಲಿ ಚಿವುಟತೊಡಗಿದ. ಆದರೂ ಬಾಲಕಿ ಒಂದಿನಿತೂ ಅಲಗಾಡದೇ ಸತ್ತಂತೆ ಬಿದ್ದುಕೊಂಡಳು. ಇದನ್ನು ಕಂಡು ಬಾಲಕಿ ಸತ್ತಿದ್ದಾಳೆಂದು ಭಾವಿಸಿ ಅತ್ಯಾಚಾರಿಯು ಅಲ್ಲಿಂದ ಹೊರಟ.

ಆತ ಕೊಂಚ ದೂರ ಹೋಗುತ್ತಲೇ ಬಾಲಕಿ ಎದ್ದು ನಿಂತು ಅಲ್ಲಿಂದ ಓಡಲು ತೊಡಗಿದಳು. ಇದನ್ನು ಕಂಡ ಅತ್ಯಾಚಾರಿಯು ಮತ್ತೆ ಆಕೆಯ ಬೆನ್ನ ಹಿಂದೆ ಓಡಿ ಬರಲು ತೊಡಗಿದ. ಆದರೆ ದಾರಿಯಲ್ಲಿ ಕಲ್ಲೊಂದಕ್ಕೆ ಕಾಲು ಬಡಿದು ಆತ ಮುಗ್ಗರಿಸಿ ನೆಲಕ್ಕೆ ಬಿದ್ದ.

ಅತ್ಯಾಚಾರಿಯಿಂದ ಪ್ರಾಣ ರಕ್ಷಿಣಸಿಕೊಂಡ ಬಾಲಕಿ ಅಲ್ಲಿಂದ ತನ್ನ ಮನೆಗೆ ಓಡಿ ಬಂದಳು. ಆಕೆಯ ಮೈಮೇಲಿನ ಬಟ್ಟೆ ರಕ್ತಸಿಕ್ತವಾಗಿರುವುದನ್ನು ಕಂಡು ಆಕೆಯ ತಂದೆ – ತಾಯಿ ದಿಗಿಲುಗೊಂಡರು.

ಬಾಲಕಿ ತನ್ನ ಮೇಲೆ ನಡೆದಿರುವ ಅಪಹರಣ ಹಾಗೂ ಅತ್ಯಾಚಾರದ ಘಟನೆಯನ್ನು ಹೆತ್ತವರಿಗೆ ವಿವರಿಸುತ್ತಾ ಕುಸಿದು ಬಿದ್ದಳು. ಕೆಳ ಹೊಟ್ಟೆಗೆ ಹಾಗೂ ಸೊಂಟದ ಕೆಳ ಭಾಗದಲ್ಲಿ ತನಗೆ ವಿಪರೀತ ನೋವಾಗುತ್ತಿದೆ ಎಂದು ಅಳತೊಡಗಿದ ಬಾಲಕಿಯನ್ನು ಹೆತ್ತವರು ಒಡನೆಯೇ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾಳೆ.

ಈ ನಡುವೆ ಬಾಲಕಿಯ ಅಪಹರಣ ಮತ್ತು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿ ಚಿತ್ರಿಕೆಗಳಲ್ಲಿ ಅತ್ಯಾಚಾರಿಯ ಅಸ್ಪಷ್ಟ ಚಿತ್ರ ಕಂಡು ಬಂದಿದೆ. ಆತ ಬಾಲಕಿಯ ಮನೆ ಇರುವ ಪ್ರದೇಶದ ಇನ್ನೊಂದು ಓಣಿಯಲ್ಲಿ ವಾಸವಾಗಿರುವ ಅಪ್ರಾಪ್ತ ವಯಸ್ಸಿನ ಹುಡುಗನೇ ಇರಬೇಕೆಂಬ ಶಂಕೆ ಬಲವಾಗಿದ್ದು ಈ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.

Comments are closed.