ಮನೋರಂಜನೆ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಚಿನ್

Pinterest LinkedIn Tumblr

tirupati

ತಿರುಪತಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಪತ್ನಿ ಸಮೇತ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಚಿನ್ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ನಿರ್ಮಾಪಕ ಅಲ್ಲು ಅರವಿಂದ, ಮತ್ತಿತರ ಗಣ್ಯರು, ಬಾಲಾಜಿ ದರ್ಶನ ಪಡೆದಿದ್ದಾರೆ.

ಮಂಗಳವಾರ ರಾತ್ರಿಯೇ ತಿರುಮಲಕ್ಕೆ ಆಗಮಿಸಿದ ಅವರುಗಳು, ಇಂದು ಬೆಳಿಗ್ಗೆ ದೇವರ ದರ್ಶನ ಪಡೆದಿದ್ದಾರೆ. ಸಚಿನ್, ಪತ್ನಿ ಅಂಜಲಿ ಹಾಗೂ ಚಿತ್ರರಂಗದ ದಿಗ್ಗಜರು, ಉದ್ಯಮಿಗಳು ಒಟ್ಟಿಗೆ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Comments are closed.