ಅಂತರಾಷ್ಟ್ರೀಯ

ಸುಂದರ್ ಪಿಚೈಗೆ 2015ರಲ್ಲಿ ಗೂಗಲ್ ನೀಡಿದ ಸಂಬಳ ಕೇಳಿದರೆ ನೀವೇ ಶಾಕ್ ಆಗಬಹುದು…!

Pinterest LinkedIn Tumblr

sundar

ಕ್ಯಾಲಿಫೋರ್ನಿಯಾ: ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ 2015ರಲ್ಲಿ ಗೂಗಲ್ ಕಂಪೆನಿ 100.5 ದಶಲಕ್ಷ ಡಾಲರ್(ಅಂದಾಜು 674 ಕೋಟಿ ರೂ.) ವೇತನವನ್ನು ಪಾವತಿಸಿದೆ.

ಪಿಚೈ ಅವರಿಗೆ 4.3 ಕೋಟಿ ರೂ. ವೇತನ ರೂಪದಲ್ಲಿ ಸಿಕ್ಕಿದರೆ, 661 ಕೋಟಿ ರೂ. ನಿರ್ಬಂಧಿತ ಷೇರುಗಳ ರೂಪದಲ್ಲಿ ಸಿಕ್ಕಿದೆ. 2015ರ ಫೆಬ್ರವರಿಯಲ್ಲಿ ಸುಂದರ್ ಪಿಚೈ ಅವರಿಗೆ ಗೂಗಲ್ ಕಂಪನಿ 1320 ಕೋಟಿ ರೂ.ಗಳನ್ನು ನಿರ್ಬಂಧಿತ ಷೇರುಗಳ ರೂಪದಲ್ಲಿ ನೀಡಿತ್ತು.

ತಮಿಳುನಾಡು ಮೂಲದ ಸುಂದರ್ ಪಿಚೈ ಐಐಟಿ ಖರಗ್ ಪುರದ ಹಳೆ ವಿದ್ಯಾರ್ಥಿಯಾಗಿದ್ದು, 2004ರಲ್ಲಿ ಗೂಗಲ್ ಸೇರಿದ್ದರು. ಗೂಗಲ್ ಕ್ರೋಮ್, ಆಂಡ್ರಾಯ್ಡ್ ಮುಖ್ಯಸ್ಥರಾಗಿದ್ದ ಇವರನ್ನು 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಿಸಿತ್ತು.

Comments are closed.