ರಾಷ್ಟ್ರೀಯ

ಸೇವಾ ತೆರಿಗೆ ಹೆಚ್ಚಳದಿಂದ ಈ ವಸ್ತುಗಳು-ಸೇವೆಗಳು ಇಂದಿನಿಂದ ತುಟ್ಟಿ…!

Pinterest LinkedIn Tumblr

tax-exemption

ನವದೆಹಲಿ: ಬಜೆಟ್ ನಲ್ಲಿ ಘೋಷಿಸಲಾಗಿದ್ದ ಸೇವಾ ತೆರಿಗೆಯಲ್ಲಿನ ಬದಲಾವಣೆಗಳು ಜೂನ್ 1 ರಿಂದ ಜಾರಿಗೆ ಬರಲಿದ್ದು ಕಾರ್ ಗಳು, ಸಿಗರೆಟ್ ಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ ಇತ್ಯಾದಿ ತುಟ್ಟಿಯಾಗಲಿವೆ.

ಸೇವಾ ತೆರಿಗೆಯಲ್ಲಿ ಹೆಚ್ಚುವರಿ ಕೃಷಿ ಕಲ್ಯಾಣ ಸೆಸ್ ೦.೫% ಸೇರಿದ್ದು, ಇನ್ನುಮುಂದೆ ಸೇವಾತೆರಿಗೆ 15%ಗೆ ಹೆಚ್ಚಳಗೊಂಡಿದ್ದು, ನಿಮ್ಮ ದೂರವಾಣಿ ಬಿಲ್, ರೈಲು-ವಿಮಾನ ಪ್ರಯಾಣ, ಹೋಟೆಲ್ ಬಿಲ್ ಇವೆಲ್ಲವೂ ನಿಮ್ಮ ಪರ್ಸ್ ಗೆ ಹೊರೆಯಾಗಲಿವೆ.

ಅಲ್ಲದೆ ಹಿಂದಿನ ಸರ್ಕಾರಗಳನ್ನು ಅನುಕರಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಎಲ್ಲ ಹೊಗೆಸೊಪ್ಪಿನ ಉತ್ಪನ್ನಗಳ ಮೇಲೆ 15% ಅಬಕಾರಿ ತೆರಿಗೆಯನ್ನು ಹೇರಿದ್ದಾರೆ.

ಜೂನ್ 1 ರಿಂದ ತುಟ್ಟಿಯಾಗಲಿರುವ ಕೆಲವು ಉತ್ಪನ್ನಗಳ-ಸೇವೆಗಳ ಪಟ್ಟಿ ಇಂತಿದೆ.
೧. ಸಿಗರೆಟ್ ಗಳು
೨. ಸಿಗಾರ್
೩. ಹೊಗೆಸೊಪ್ಪು ಉತ್ಪನ್ನಗಳು
೪. ಕಾರ್
೫. ಹೋಟೆಲ್ ಊಟ, ರೈಲು-ವಿಮಾನ ಪ್ರಯಾಣ, ಎಲ್ಲ ಬಿಲ್ ಗಳು
೬. ಸಿದ್ಧಪಡಿಸಿದ ಉಡುಪುಗಳು ಮತ್ತು ಬ್ರಾಂಡೆಂಡ್ ಉತ್ಪನ್ನಗಳು
೭. ಚಿನ್ನ, ಬೆಳ್ಳಿ; ಬೆಳ್ಳಿಯನ್ನು ಹೊರತುಪಡಿಸಿದ ಆಭರಣಗಳು
೮. ಖನಿಜಾಂಶ ನೀರು, ಇತರೆ ಸಕ್ಕರೆ ದ್ರವ್ಯಗಳು
೯. ೨ ಲಕ್ಷಕ್ಕೂ ಹೆಚ್ಚಿನ ನಗದು ವ್ಯವಹಾರದ ಸೇವೆಗಳು ಮತ್ತು ದಾಸ್ತಾನು
೧೦. ಪ್ಲಾಸ್ಟಿಕ್ ಚೀಲಗಳು
೧೧. ಆಮದುಗೊಂಡ ನಕಲಿ ಆಭರಣಗಳು
೧೨. ಸೌರಶಕ್ತಿ ನೀರು ಕಾಯಿಸುವ ಯಂತ್ರ
೧೩. ಕಾನೂನು ಸೇವೆ
೧೪. ಲಾಟರಿ ಟಿಕೆಟ್ ಗಳು
೧೫. ಸಾಗಾಣೆ ಮಾಡುವ ಸೇವೆ
೧೬. ಇ-ರೀಡಿಂಗ್ ಉಪಕರಣಗಳು
೧೭. ಗಾಲ್ಫ್ ಕಾರ್ ಗಳು
೧೮. ಚಿನ್ನದ ಗಟ್ಟಿಗಳು ಇತ್ಯಾದಿ.

Comments are closed.