ಕರಾವಳಿ

ಅಸೈಗೋಳಿಯ‌ ಅಭಯ‌ ಅಶ್ರಯದಲ್ಲಿ 16ನೇ ವಿಶ್ವ ಹಾಲು ದಿನಾಚರಣೆ

Pinterest LinkedIn Tumblr

Konaje_Milk_Day_1

ಉಳ್ಳಾಲ.ಜೂ, 01: ಇಂದು ಹಾಲು ” ವಿಶ್ವ‌ಆಹಾರ ” ವೆಂದು (world global food) ಅಂತರಾಷ್ಟ್ರೀಯ‌ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ಹಾಲು ಪರಿಪೂರ್ಣ‌ ಆಹಾರವಾಗಿ ವಿಶ್ವ ಮಾನ್ಯತೆ ಪಡೆದಿದೆ‌ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ‌ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ: ಬಿ.ವಿ. ಸತ್ಯನಾರಾಯಣ ಹೇಳಿದರು.

ಅವರು ಬುಧವಾರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ‌ಒಕ್ಕೂಟದ ವತಿಯಿಂದನಡೆದ 16ನೇ ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಕೊಣಾಜೆಯ ಅಸೈಗೋಳಿಯ ಅಭಯ‌ ಆಶ್ರಯದಲ್ಲಿ ಹಿರಿಯ ನಾಗರಿಕರು ಮತ್ತು ಪುಟಾಣಿಗಳಿಗೆ ನಂದಿನಿ ಸುವಾಸಿತ ಹಾಲು ಮತ್ತು ಸಿಹಿ ತಿಂಡಿ ವಿತರಿಸಿ ಮಾತನಾಡಿದರು.

Konaje_Milk_Day_2 Konaje_Milk_Day_3 Konaje_Milk_Day_4 Konaje_Milk_Day_5 Konaje_Milk_Day_6

ವಿಶ್ವ ಹಾಲು ದಿನಾಚರಣೆಯಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಸರಬರಾಜಿನಲ್ಲಿ ಸಂಯೋಜನೆಗೊಂಡಿರುವ ವ್ಯವಸ್ಥೆಯನ್ನು ಪರಿಚಯ ಮಾಡುವುದು ಮುಖ್ಯ‌ ಉದ್ದೇಶವಾಗಿರುತ್ತದೆ. ಮಾನವನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಹಾಲಿನ ಮಹತ್ವದ ಬಗ್ಗೆ ಗ್ರಾಹಕರಿಗೆ‌ ಅರಿವು ಮೂಡಿಸುವುದು ಹಾಗೂ ಹೈನುಗಾರಿಕೆ ಚಟುವಟಿಕೆಯಲ್ಲಿ ವರ್ಷಪೂರ್ತಿ ಸಕ್ರಿಯವಾಗಿ ಶ್ರಮಿಸಿ, ಹಾಲು ಉತ್ಪಾದಿಸುವ ಉತ್ಪಾದಕರು, ಹಾಲು ಸಂಗ್ರಹಣೆಯಲ್ಲಿ ನಿರತರಾಗಿರುವ ಸಂಸ್ಥೆಗಳು ಹಾಲನ್ನು ಸ್ವೀಕರಿಸಿ, ಸಂಸ್ಕರಿಸಿ, ಹಾಲು ಮತ್ತು ಹಾಲಿನ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ, ವಿವಿಧ ಹಂತಗಳಲ್ಲಿ ಸಮನ್ವಯತೆ ಸಾಧಿಸುವವರ ಸೇವೆಯನ್ನು ಸ್ಮರಿಸುವ ಮೂಲಕ ವಿಶ್ವ ಹಾಲು ದಿನಾಚರಣೆಯನ್ನು‌ಅರ್ಥಪೂರ್ಣವಾಗಿ ಪ್ರತಿ ವರ್ಷ ಜೂನ್ 1ರಂದು ಆಚರಿಸಲಾಗುತ್ತಿದೆ‌ ಎಂದು ಹೇಳಿದರು.

ಅಭಯ‌ ಅಶ್ರಯದ‌ ಅಧ್ಯಕ್ಷ  ಶ್ರೀನಾಥ್ ಹೆಗ್ಡೆ ಕಾರ್ಯಕ್ರಮದ‌ ಆಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಯಾವುದೆ ಕಾರ್ಯ ಮಾಡಬೇಕಾದರೆ ಮಹಾಗಣಪತಿ ಮತ್ತು ಸತ್ಯನಾರಾಯಣನ್ನು ನೆನಪಿಸುದು.ಅದರೆ‌ ಇವತ್ತು ಜೀವಂತವಾಗಿ ಸತ್ಯನಾರಾಯಣ ದೇವರು ನಮ್ಮ‌ಅಶ್ರಮಕ್ಕೆ ಬಂದಿದ್ದು ಹಿರಿಯ ನಾಗರಿಕರಿಗೆ ಮತ್ತು ಪುಟಾಣಿಗಳಿಗೆ ಹಾಲು ಸಿಹಿ ತಿಂಡಿ ಹಂಚಿದ್ದಾರೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ‌ ಒಕ್ಕೂಟಕ್ಕೆ  ನಮ್ಮ ಸಂಸ್ಥೆಯ ವತಿಯಿಂದ ಧನ್ಯವಾದವನ್ನು ಸಲ್ಲಿಸುತ್ತಿದೆನೆ‌ ಎಂದು ಹೇಳಿದರು.

ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ: ಕೆ.ಎಂ. ಲೋಹಿತೇಶ್ವರ, ರವಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಅಭಯ‌ಶ್ರಯದ ಪುಟಾಣಿ ವೇಣು ಗೋಪಾಲ್ ಪ್ರಾರ್ಥಿಸಿದರು. ಸಹಾಯಕ ವ್ಯವಸ್ಥಾಪಕ ಜಯದೇವಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.

Comments are closed.