ಮನೋರಂಜನೆ

ಈಗ ಮತ್ತೆ ಸುದ್ದಿಯಲ್ಲಿ ಶೆರ್ಲಿನ್ ಚೋಪ್ರಾ ! ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದೆಎನ್ನುವ ಈಕೆ ಮುಂದೆ ಹೇಳಿದ್ದೇನು…?

Pinterest LinkedIn Tumblr

Sherlyn-Chopra

ಬಾಲಿವುಡ್ನ ಸ್ವಯಂಘೊಷಿತ ‘ಬ್ಯಾಡ್ ಗರ್ಲ್’, ಪ್ಲೇಬಾಯ್ ಮ್ಯಾಗಜಿನ್ನ ‘ನಗ್ನಸುಂದರಿ’, 3ಡಿಯಲ್ಲಿ ‘ಕಾಮಸೂತ್ರ’ ತೋರಿಸಲು ಮುಂದಾಗಿದ್ದ ಖತರ್ನಾಕ್ ಬೆಡಗಿ, ಕೆಲಸಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಸದ್ದು ಮಾಡುವ ಚೆಲುವೆ ಶೆರ್ಲಿನ್ ಚೋಪ್ರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಹೊಸ ಸಿನಿಮಾ ಅಲ್ಲ. ಬದಲಾಗಿ ವಿವಾದಾತ್ಮಕ ಹೇಳಿಕೆಯಿಂದ. ಅದೇನು ಹೊಸತಲ್ಲ, ಆದರೂ ಈಗವರು ಆಡಿರುವ ಮಾತು ಹಲವರ ಹುಬ್ಬೇರುವಂತೆ ಮಾಡಿದೆ!

2002ರಲ್ಲಿ ಬಣ್ಣ ಹಚ್ಚಿದ ಈ ಬೆಡಗಿ 2009ರವರೆಗೆ ಸುಮಾರು ಒಂದು ಡಜನ್ ಚಿತ್ರದಲ್ಲಿ ನಟಿಸಿದ್ದರು. ನಂತರ ಅವಕಾಶಗಳು ಸಿಗದ ಕಾರಣ ವಿವಾದಾತ್ಮಕ ಹೇಳಿಕೆಗಳ ಮೂಲಕ ಲೈಮ್ೈಟ್ಗೆ ಬರಲು ಯತ್ನಿಸಿದರು. ಕ್ರಮೇಣ ಅಂತರ್ಜಾಲ ತಾಣಗಳಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿ ವಯಸ್ಕರ ಮ್ಯಾಗಜಿನ್ ‘ಪ್ಲೇಬಾಯ್’ ಗಮನ ಸೆಳೆದರು. 2012ರಲ್ಲಿ ಆ ಮ್ಯಾಗಜಿನ್ಗಾಗಿಯೂ ‘ಹುಟ್ಟುಡುಗೆ’ಯಲ್ಲಿ ಪೋಸ್ ಕೊಟ್ಟು ಕಾಂಟ್ರವರ್ಸಿ ಸೃಷ್ಟಿಸಿದರು. ಆ ಬಳಿಕ ಮತ್ತೆ ಭಾರತಕ್ಕೆ ವಾಪಸ್ಸಾದ ಶೆರ್ಲಿನ್ ‘ಕಾಮಸೂತ್ರ 3ಡಿ’ ಚಿತ್ರಕ್ಕೆ ಸೈನ್ ಮಾಡಿದರು. ಆದರೆ ಇನ್ನೇನು ರಿಲೀಸ್ ಆಗುವ ಹೊತ್ತಿಗೆ ಚಿತ್ರತಂಡದೊಂದಿಗೆ ಜಗಳವಾಡಿಕೊಂಡು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈಗ ಆ ಚಿತ್ರವೂ ರಿಲೀಸ್ ಆಗಿಲ್ಲ, ಈ ಬ್ಯಾಡ್ ಗರ್ಲ್ಗೂ ಅವಕಾಶಗಳಿಲ್ಲ. ಹೀಗಾಗಿಯೇ ಜನ ನನ್ನನ್ನು ಮರೆತುಬಿಟ್ಟರೆ ಕಷ್ಟ ಅಂತ ಮತ್ತೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸೌಂಡ್ ಮಾಡುತ್ತಿದ್ದಾರೆ. ‘ನಾನು ಮಾಡೆಲಿಂಗ್ ಮಾಡುತ್ತಿದ್ದಾಗ, ನನಗಿಂತ ದುಪ್ಪಟ್ಟು ವಯಸ್ಸಿನವರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ಅವರು ನನಗೆ ದುಬಾರಿ ಬೆಲೆಯ ಗಿಫ್ಟ್ಗಳನ್ನು ಕೊಡಿಸುತ್ತಿದ್ದರು. ಅವರು ಹೀಗೆ ಗಿಫ್ಟ್ ಕೊಟ್ಟ ಮಾತ್ರಕ್ಕೆ, ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾರೆ, ಕೇರ್ ಮಾಡುತ್ತಿದ್ದಾರೆ ಅನ್ನೋದು ಸುಳ್ಳು ಎಂಬುದನ್ನು ತಿಳಿಯಲು ನನಗೆ ತುಂಬ ಸಮಯ ಬೇಕಾಯಿತು. ನಾನೂ ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದೆ. ಆದರೆ ನಾನೀಗ ಮೊದಲಿನಂತಿಲ್ಲ. ತುಂಬ ಬದಲಾಗಿದ್ದೇನೆ’ ಎಂದು ಅನುಭವಗಳಿಂದ ಕಲಿತ ಪಾಠಗಳ ಕುರಿತು ಹೇಳಿಕೊಂಡಿದ್ದಾರವರು.

Comments are closed.