ಮನೋರಂಜನೆ

ಅರ್ಬಾಜ್ ಖಾನ್ ಗೆ ನಾಯಕಿಯಾದ ಸನ್ನಿ ಲಿಯೋನ್ !

Pinterest LinkedIn Tumblr

arbaz

ಮಾಜಿ ಪಾರ್ನ್ಕ್ವೀನ್ ಸನ್ನಿ ಲಿಯೋನ್ ಬಾಲಿವುಡ್ಗೆ ಬಂದು 5 ವರ್ಷಗಳು ಕಳೆದಿವೆ. 7 ಐಟಂ ಸಾಂಗ್ ಸೇರಿದಂತೆ ಇದುವರೆಗೆ 15 ಚಿತ್ರಗಳಲ್ಲಿ ‘ನಟಿಸಿ’ದ್ದಾರೆ. ಇನ್ನು ಅವರು ನಾಯಕಿಯಾಗಿ ಕಾಣಿಸಿಕೊಂಡಿರುವ 8 ಚಿತ್ರಗಳಲ್ಲಿ ಮೊದಲ ಸಿನಿಮಾ ‘ಜಿಸ್ಮ್ 2’, ‘ರಾಗಿಣಿ ಎಂಎಂಎಸ್ 2’, ಬಿಟ್ಟರೆ ಕೆಲವು ಬಾಕ್ಸ್ ಆಫೀಸಿನಲ್ಲಿ ಸಮಾಧಾನಕರ ಗಳಿಕೆ ಕಂಡಿವೆ. ಉಳಿದವುಗಳ ವಿಷಯ ಬೇಡ ಬಿಡಿ. ಇನ್ನು ಇದೇ ವರ್ಷ ರಿಲೀಸ್ ಆದ ‘ಮಸ್ತಿಝಾದೆ’ಗೆ ವಿಮರ್ಶಕರು ಝಾಡಿಸಿದ್ದರೆ, ‘ಒನ್ ನೈಟ್ ಸ್ಟ್ಯಾಂಡ್’ ಹೇಳ ಹೆಸರಿಲ್ಲದೆ ಥಿಯೇಟರ್ನಿಂದ ಎತ್ತಗಂಡಿಯಾಗಿದೆ. ಆದರೂ ಸನ್ನಿಗೆ ಅವಕಾಶಗಳ ಕೊರತೆಯಿಲ್ಲ. ಈಗಲೂ ಅವರು ‘ಬೇಯಿಮಾನ್ ಲವ್’, ‘ಟೀನಾ ಆಂಡ್ ಲೋಲೊ’ ಚಿತ್ರಗಳಲ್ಲಿ ಬಿಜಿ. ಮಾತ್ರವಲ್ಲ ಕಿಂಗ್ ಖಾನ್ ಶಾರುಖ್ ಅವರ ‘ರಯೀಸ್’ನಲ್ಲೂ ಐಟಂ ಸಾಂಗ್ಗೆ ಸೊಂಟ ಬಳುಕಿಸಿದ್ದಾರೆ.

ಇದರ ನಡುವೆ ಸನ್ನಿಗೆ ಮತ್ತೊಂದು ಅವಕಾಶ ದೊರೆತಿದೆ. ರಾಜೀವ್ ವಾಲಿಯಾ ನಿರ್ದೇಶಿಸಲಿರುವ ಚೊಚ್ಚಲ ಚಿತ್ರ ‘ತೇರಾ ಇಂತೆಜಾರ್’ಗೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪತ್ನಿ ಮಲೈಕಾ ಅರೋರಾ ಖಾನ್ರಿಂದ ದೂರಾಗಿ ‘ಒಬ್ಬಂಟಿ’ಯಾಗಿರುವ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್, ಸನ್ನಿಗೆ ‘ಜಂಟಿ’ಯಾಗುತ್ತಿರುವ ನಾಯಕ. ಸದ್ಯ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಬಿಜಿಯಿರುವ ಸನ್ನಿ, ಕಥೆ ಕೇಳಿದ್ದೇ ತಡ ಹಿಂದು ಮುಂದು ನೋಡದೆ, ಚಿತ್ರಕ್ಕೆ ಸೈನ್ ಮಾಡಿದರಂತೆ. ಇದೇ ಆಗಸ್ಟ್ನಲ್ಲಿ ‘ತೇರಾ…’ ಶೂಟಿಂಗ್ ಪ್ರಾರಂಭವಾಗಲಿದ್ದು, ಗುಜರಾತ್ನ ಕಛ್ನಲ್ಲಿ 25 ದಿನಗಳ ಮೊದಲ ಶೆಡ್ಯುಲ್ ಪ್ಲ್ಯಾನ್ ಮಾಡಲಾಗಿದೆ. ನಂತರ ವಿದೇಶಗಳಿಗೆ ಹಾರುವ ಯೋಜನೆ ಚಿತ್ರತಂಡದ್ದು. ಚಿತ್ರತಂಡದ ಮೂಲಗಳ ಪ್ರಕಾರ ಸನ್ನಿ, ಇದೇ ಮೊದಲ ಬಾರಿಗೆ ಇಂತಹ ಜಾನರ್ನ ಚಿತ್ರದಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದೇನೆ ಇರಲಿ, ಇನ್ನಾದರೂ ಸನ್ನಿ ಸಿನಿಮಾಗಳು ಅವರ ‘ನೀಲಿ ಸಿನಿಮಾಗಳ’ಷ್ಟೆ ಹಿಟ್ ಆಗಲಿ ಅನ್ನೋದು ಅವರ ‘ಹಾರ್ಡ್ಕೋರ್’ ಅಭಿಮಾನಿಗಳ ಆಶಯ!

Comments are closed.