ರಾಷ್ಟ್ರೀಯ

ಮಾರುತಿ: 76 ಸಾವಿರ ಬಲೆನೊ ವಾಪಸ್‌

Pinterest LinkedIn Tumblr

balenoನವದೆಹಲಿ (ಪಿಟಿಐ): ದೋಷಪೂರಿತ ಏರ್‌ಬ್ಯಾಗ್‌ ಸಾಫ್ಟ್‌ವೇರ್‌ ಮತ್ತು ಫ್ಯುಯೆಲ್‌ ಫಿಲ್ಟರ್‌ ಬದಲಾಯಿಸುವ ಉದ್ದೇಶದಿಂದ ಮಾರುತಿ ಸುಜುಕಿ ಇಂಡಿಯಾ, 75,419 ಬಲೆನೊ ಕಾರುಗಳನ್ನು ವಾಪಸ್‌ ಪಡೆಯಲಿದೆ.

ಆಟೊ ಗೇರ್‌ ಶಿಫ್ಟ್‌ ತಂತ್ರಜ್ಞಾನದ ಡಿಜೈರ್‌ ಕಾರ್‌ನ ಫ್ಯುಯೆಲ್‌ ಫಿಲ್ಟರ್‌ ಬದಲಿಸಲೂ 1,961 ಕಾರುಗಳನ್ನು ವಾಪಸ್‌ ಪಡೆಯಲಾಗುತ್ತಿದೆ.

2015ರ ಆಗಸ್ಟ್‌ 3 ರಿಂದ 2016ರ ಮೇ 17ರವರೆಗಿನ ಅವಧಿಯಲ್ಲಿ ತಯಾರಿಸಿದ ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ಬಲೆನೊ ಕಾರುಗಳಲ್ಲಿನ ಏರ್‌ಬ್ಯಾಗ್‌ ನಿಯಂತ್ರಿಸುವ ಸಾಫ್ಟ್‌ವೇರ್‌ ಬದಲಿಸುವ ಉದ್ದೇಶದಿಂದ ಕಾರುಗಳ ವಾಪಸ್‌ಗೆ ನಿರ್ಧರಿಸಲಾಗಿದೆ.

2015ರ ಆಗಸ್ಟ್‌ 3 ರಿಂದ 2016ರ ಮಾರ್ಚ್‌ 22ರವರೆಗಿನ ಅವಧಿಯಲ್ಲಿ ತಯಾರಿಸಲಾದ 15,995 ಬಲೆನೊ ಡೀಸೆಲ್‌ ಚಾಲಿತ ಕಾರುಗಳಲ್ಲಿನ ದೋಷಪೂರಿತ ಫ್ಯುಯೆಲ್‌ ಫಿಲ್ಟರ್‌ ಬದಲಾಯಿಸಲು ವಾಪಸ್‌ ಪಡೆದುಕೊಳ್ಳಲಾಗುತ್ತಿದೆ. ವಾಪಸ್‌ ಪಡೆದುಕೊಳ್ಳುತ್ತಿರುವ ಬಲೆನೊ ಕಾರುಗಳಲ್ಲಿ ರಫ್ತು ಮಾಡಲಾದ 17,231 ಕಾರುಗಳೂ ಸೇರಿವೆ.

Comments are closed.