
ನವದೆಹಲಿ: ಕ್ರಿಕೆಟ್ ರಂಗದಲ್ಲಿ ಮೇರು ಪರ್ವತವಾಗಿ ಏರುತ್ತಿರುವ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಬೇಕಾದರೆ ಒಮ್ಮೆ ಯೋಚಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ವೇಗದ ಬೌಲರ್ ಹಾಗೂ ಕೆಕೆಆರ್‌ನ ತರಬೇತುದಾರ ವಾಸಿಂ ಅಕ್ರಂ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್‌ನ ಎಲ್ಲ ರೀತಿಯ ಶಾಟ್‌ಗಳಲ್ಲಿ ಪರಿಪೂರ್ಣವಾಗಿರುವುದೇ ಅಲ್ಲದೆ ರಿವರ್ಸ್ ಶಾಟ್ , ಲ್ಯಾಪ್ ಶಾಟ್ ಬಾರಿಸುವುದರಲ್ಲೂ ನಿಸ್ಸೀಮರಾಗಿದ್ದಾರೆ ಎಂದು ಬಣ್ಣಿಸಿದರು.
ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ನನ್ನ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ ಎಂದು ಹೇಳಿದ್ದರು, ಆದರೆ ಈಗ ಅವರು ಆಡುತ್ತಿರುವ ಬ್ಯಾಟಿಂಗ್ ಲಯವನ್ನು ನೋಡಿದರೆ ಅವರಿಗೆ ಬೌಲಿಂಗ್ ಮಾಡುವುದೇ ನನಗೆ ದೊಡ್ಡ ಸವಾಲಿಗೆ ಎಂದು ಅಕ್ರಮ ಹೇಳಿದ್ದಾರೆ.
ನಾನು ನನ್ನ ಇಡೀ ಕ್ರಿಕೆಟ್ ಜೀವನದಲ್ಲಿ 50 ಸಿಕ್ಸರ್‌ಗಳನ್ನು ಸಿಡಿಸಿದ್ದೇನೆ ಆದರೆ ವಿರಾಟ್ ಐಪಿಎಲ್ 9ರಲ್ಲಿ 15 ಪಂದ್ಯಗಳಿಂದಲೇ 36 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಖರಿಯನ್ನು ನೋಡಿದರೆ ನಮಗೆ ಅಂದಿನ ಸಚಿನ್ ತೆಂಡೂಲ್ಕರ್‌ರ ಆಟ ಕಣ್ಣ ಮುಂದೆ ಬರುತ್ತದೆ ಎಂದರು.
ನಾನು ಕ್ರಿಕೆಟ್ ಕೆರಿಯರ್‌ನ ವೇಳೆ ಸಚಿನ್‌ತೆಂಡೂಲ್ಕರ್ ಅವರು ಕ್ರೀಸ್‌ನಲ್ಲಿದ್ದರೆ ಅವರಿಗೆ ಯಾವ ರೀತಿಯ ಬೌಲಿಂಗ್ ಮಾಡಬೇಕೆಂಬ ಚಿಂತೆ ಕಾಡುತ್ತಿತ್ತು, ಈಗ ವಿರಾಟ್ ಕೊಹ್ಲಿ ಗೆ ಬೌಲಿಂಗ್ ಮಾಡಲು ಯೋಚಿಸಬೇಕೆಂದು ವಾಸಿಮ್ ಅಕ್ರಮ್ ತಿಳಿಸಿದ್ದಾರೆ. ಐಪಿಎಲ್9ನೆ ಆವೃತ್ತದಲ್ಲಿ 4 ಶತಕಗಳೊಂದಿಗೆ 919 ರನ್‌ಗಳನ್ನು ಬಾರಿಸಿರುವ ಆರ್‌ಸಿಬಿ ನಾಯಕ ವಿರಾಟ್ ಫೈನಲ್ ಪಂದ್ಯದಲ್ಲೂ ವೀರಾವೇಶ ಹೋರಾಟ ನೀಡುವ ಮೂಲಕ ಚೊಚ್ಚಲ ಐಪಿಎಲ್ ಅನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ ಎಂದು ಅಕ್ರಂ ಹೇಳಿದರು.
ಆರ್‌ಸಿಬಿ ತಂಡದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ , ಮಿ.360 ಎಬಿಡಿವಿಯರ್ಸ್ ಗ್ರೇಟ್‌ಮ್ಯಾಚ್ ವಿನ್ನರ್ ಅವರು ಗುಜರಾತ್ ಲಯನ್ಸ್ ವಿರುದ್ಧ ಆಡಿದ ರೀತಿ ಅಮೋಘ ಎಂದು ಅಕ್ರಮ್ ಇದೇ ವೇಳೆ ಬಣ್ಣಿಸಿದರು.
Comments are closed.