ರಾಷ್ಟ್ರೀಯ

ಚುಡಾಯಿಸಿದ್ದನ್ನು ಪ್ರಶ್ನಿಸಲು ಹೋದ ಅಪ್ಪ-ಮಗಳ ಮೇಲೆ ಗುಂಡು ಹಾರಿಸಿದರು

Pinterest LinkedIn Tumblr

firing_harrasement

ಇಠಾ: ಮಗಳನ್ನು ಚುಡಾಯಿಸುತ್ತಿದ್ದನ್ನು ಕೇಳಲು ಹೋದ ತಂದೆ ಮತ್ತು ಮಗಳ ಮೇಲೆ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿರುವ ಘಟನೆ ನಿನ್ನೆ ನಡೆದಿದೆ.
ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿರಬೇಕಾದರೆ, ಅಲ್ಲಿಗೆ ಬಂದ ಇಬ್ಬರು ಯುವಕರು ಆಕೆಯನ್ನು ಚುಡಾಯಿಸಿದ್ದಾರೆ. ಇದನ್ನು ತಂದೆ ಪ್ರಶ್ನಿಸಲು ಹೋದಾಗ ತಂದೆಯ ಮೇಲೆ ಹಲ್ಲೆ ಮಾಡಿದಲ್ಲದೇ, ತಂದೆ- ಮಗಳ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಇಬ್ಬರಿಗೂ ತಗಲದೆ ಅಪಾಯದಿಂದ ಪಾರಾಗಿದ್ದಾರೆ.
ಇಠಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಅಲಾಂ ಮತ್ತು ನಿಯಾಜ್ ಅಲಿ ಎಂದು ಗುರುತಿಸಲಾಗಿದೆ. ಆರೋಪಿಗಳು ತಲೆಮರಿಸಿಕೊಂಡಿದ್ದು, ತಂದೆ ಮಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇಠಾ ಪೊಲೀಸ್ ಠಾಣೆ ಸರ್ಕಲ್ ಅಧಿಕಾರಿ ನಿಬೇಶ್ ಕಟಿಯಾರ್ ತಿಳಿಸಿದ್ದಾರೆ.

Comments are closed.