ರಾಷ್ಟ್ರೀಯ

ಪಾಪಿಗಳು ಹೆಚ್ಚುತ್ತಿರುವುದರಿಂದ ದೇವಾಲಯಗಳ ಆದಾಯವೂ ಹೆಚ್ಚುತ್ತಿದೆ: ಚಂದ್ರಬಾಬು ನಾಯ್ಡು

Pinterest LinkedIn Tumblr

Chandrababu-Naidu

ವಿಜಯವಾಡ: ದೇವಾಲಯಗಳ ಆದಾಯಕ್ಕೂ ಪಾಪಿಗಳಿಗೂ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸಂಬಂಧ ಕಲ್ಪಿಸಿದ್ದು, ಹೆಚ್ಚು ಪಾಪ ಕೃತ್ಯಗಳನ್ನು ಮಾಡುವವರಿಂದ ದೇವಾಲಯಗಳಿಗೆ ಹೆಚ್ಚು ಆದಾಯ ಬರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಡದಲ್ಲಿ ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, ಜನಗಳು ಹೆಚ್ಚು ಪಾಪ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಪರಿಹಾರ ಕಂಡುಕೊಳ್ಳಲು ದೇವಾಲಯಗಳಿಗೆ ಹೆಚ್ಚು ಹಣವನ್ನು ದೇಣಿಗೆ/ ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಇದರಿಂದ ದೇವಾಲಯಗಳ ಆದಾಯ ಶೇ.27 ರಷ್ಟು ಹೆಚ್ಚಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯವಾಗಿ ಕುಸಿತ ಕಾಣುತ್ತಿರುವುದರ ಬಗ್ಗೆ ಮಾತನಾಡಿರುವ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಬರಿ ಮಲೈ ದೇವಾಲಯಕ್ಕೆ ಮಾಲೆ ಹಾಕಿಕೊಂಡು ಹೋಗುತ್ತಿದ್ದಾರೆ. ಮಾಲೆ ಧರಿಸಿದ 40 ದಿನಗಳು ಮದ್ಯ ಸೇವನೆ ಬಿಡಬೇಕಿರುವುದರಿಂದ ಮದ್ಯ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿಗಳಿಗೆ ಹೆಚ್ಚು ಕಾರ್ಯಕ್ಷಮತೆ ಪ್ರದರ್ಶಿಸಲು ಕರೆ ನೀಡಿರುವ ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಎರಡು ವರ್ಷಗಳ ಕೂಸು. ಅದನ್ನು 2029 ರ ವೇಳೆಗೆ ದೇಶದ ನಂ.1 ರಾಜ್ಯವನ್ನಾಗಿಸಬೇಕು ಎಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಜನರಿಗೆ ಶೇ.80 ರಷ್ಟು ತೃಪ್ತಿ ನೀಡುವಂತಹ ಆಡಳಿತ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

Comments are closed.