ಮನೋರಂಜನೆ

ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾಗಿಂತ ಮೊದಲು ಯಾರ ಮೇಲೆ ಕ್ರಷ್ ಇತ್ತು ಗೊತ್ತೇ…? ಆ ಬಾಲಿವುಡ್ ನಟಿಯ ಹೆಸರು…..!

Pinterest LinkedIn Tumblr

virat-kohli

ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಗಾಧ ಸಾಧನೆ ಮಾಡುತ್ತಿರುವ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಹೊಸ ಛಾಪು ಮೂಡಿಸುತ್ತಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆಗಿನ ಕೆಲ ದಿನಗಳ ಬ್ರೇಕ್ ಅಪ್ ನಂತರ ಮತ್ತೆ ಒಂದಾಗಿರುವ ದೆಹಲಿ ಮೂಲದ ಕೊಹ್ಲಿ ವಯಕ್ತಿಕ ಜೀವನ ಕೂಡ ಸ್ಕ್ಯಾನರ್ ಗೆ ಒಳಪಟ್ಟಿದೆ.

ಅನುಷ್ಕಾ ಜೊತೆ ಕೊಹ್ಲಿ ಮತ್ತೆ ಸಂಬಂಧ ಮುಂದುವರಿಸಿದ್ದರೂ, ಕೊಹ್ಲಿಯ ಮೊದಲ ಕ್ರಷ್ ಬಗ್ಗೆ ಇದುವರೆಗೂ ಯಾರಿಗೂ ತಿಳಿದಿಲ್ಲ. ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾರನ್ನು ಪ್ರೀತಿಸುವ ಮೊದಲು ಕರೀಷ್ಮಾ ಕಪೂರ್ ಮೇಲೆ ಕ್ರಷ್ ಉಂಟಾಗಿತ್ತಂತೆ. ಹಾಗಂತ ಸ್ವತಃ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ಕರೀಷ್ಮಾ ಕಪೂರ್ ಬಾಲಿವುಡ್ ನಲ್ಲಿ ಉತ್ತುಂಗದಲ್ಲಿದ್ದ ವೇಳೆ ಸಾವಿರಾರು ಅಭಿಮಾನಿಗಳಿದ್ದರು. ಆ ವೇಳೆ ನಾನು ಕೂಡ ಕರೀಷ್ಮಾ ಅಭಿಮಾನಿಯಾಗಿದ್ದು, ಅವರ ಮೇಲೆ ಕ್ರಷ್ ಉಂಟಾಗಿತ್ತು ಎಂದು ಹೇಳಿದ್ದಾರೆ.

Comments are closed.