ಕರಾವಳಿ

ಟ್ಯೂಶನ್ ಹೋಗದ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ ಮೂರನೇ ಸ್ಥಾನ

Pinterest LinkedIn Tumblr

ಉಡುಪಿ: ಬುಧವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳ ಪೈಕಿ 594 ಅಂಕ ಗಳಿಸುವ ಮೂಲಕ ಉಡುಪಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ರಾಜ್ಯಕ್ಕೇ ಮೂರನೇ ಸ್ಥಾನವನ್ನು ಪಡೆದ ಸಾಧನೆ ಮಾಡಿದ್ದಾರೆ.

Udupi Pu Result_State Third Place_Prajna (1) Udupi Pu Result_State Third Place_Prajna (2) Udupi Pu Result_State Third Place_Prajna (3)

ಇಂಗ್ಲೀಷ್ ನಲ್ಲಿ 96, ಹಿಂದಿಯಲ್ಲಿ 99, ಸ್ಟಟಸ್ಟಿಕ್ಸ್ ನಲ್ಲಿ 100, ಫಿಜಿಕ್ಸ್ ನಲ್ಲಿ 100, ಕೆಮೆಸ್ಟ್ರಿಯಲ್ಲಿ 99, ಗಣಿತದಲ್ಲಿ 100 ಅಂಕವನ್ನು ಪಡೆದುಕೊಂಡಿರುವ ಪ್ರಜ್ಞಾ ಹೆಜಮಾಡಿ ಕೋಡಿಯ ನಿವಾಸಿಯಾಗಿದ್ದಾರೆ. ಹೇಮನಾಥ್ ಪುತ್ರನ್ ಹಾಗೂ ಶೋಭಾ ಪುತ್ರನ್ ಅವರ ಮಗಳಾಗಿರುವ ಪ್ರಜ್ಞಾ ಅವರ ಸಾಧನೆಗೆ ಹೆತ್ತವರು ಸಂತಸಪಟ್ಟಿದ್ದಾರೆ. ಸ್ವತ: ಪ್ರಜ್ಞಾಳಿಗೇ ಇಷ್ಟು ಮಾರ್ಕ್ಸ್ ಬರುತ್ತೆ ಅಂತ ನಿರೀಕ್ಷಿಸಿರಲಿಲ್ಲ. ತಂದೆ-ತಾಯಿಯವರ ಸಹಕಾರದಿಂದಲೇ ಈ ಸಾಧನೆ ಸಾದ್ಯವಾಯಿತು ಎಂದಿರುವ ಪ್ರಜ್ಞಾ ಮುಂದೆ ತಾನು ಇಂಜಿನಿಯರಿಂಗ್ ಕಲಿಯುವ ಇರದೆಯನ್ನು ವ್ಯಕ್ತಪಡಿಸಿದ್ದಾಳೆ.

ಪ್ರಜ್ಞಾ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಛಾತ್ರಾ ಸಂತಸಪಟ್ಟಿದ್ದರೆ. ಯಾವುದೇ ಟ್ಯೂಶನ್ ನ ಸಹಾಯವಿಲ್ಲದೇ ಈ ಸಾಧನೆ ಮಾಡಿರುವುದು ನಿಜಕ್ಕೂ ಸಾಧನೆಯೇ ಸರಿ ಎಂದಿರುವ ಅವರು ಕಳೆದ ಸತತ 5 ವರ್ಷಗಳಿಂದ 100 ಶೇಕಡಾ ಫಲಿತಾಂಶ ಇಲ್ಲಿ ಬರುತ್ತಿದ್ದು 258 ವಿದ್ಯಾರ್ಥಿಗಳ ಪೈಕಿ 168 ವಿದ್ಯಾರ್ಥಿಗಳು ಡಿಸ್ಟಿಂಗ್ ಶನ್ ನಲ್ಲಿ ಪಾಸಾಗಿದ್ದಾರೆ ಎಂದು ಮಾಹಿತಿ ನಿಡಿದರು.

Comments are closed.