ರಾಷ್ಟ್ರೀಯ

‘ಅಮ್ಮನಿಗಾಗಿ’ ಪ್ರಯಾಣಿಕರಿಂದ ಕೇವಲ 1ರೂ. ಬಾಡಿಗೆ ಪಡೆದು ಸಂಭ್ರಮಿಸಿದ ಆಟೋ ಚಾಲಕ!

Pinterest LinkedIn Tumblr

driv

ಕೊಯಮತ್ತೂರು: ತಮಿಳುನಾಡಿನಲ್ಲಿ ‘ಅಮ್ಮ’ ಜಯಲಲಿತಾ ಗೆಲುವಿನ ಸಂಭ್ರಮ ಮುಗಿಲುಮುಟ್ಟಿದೆ. ಜಯಲಲಿತಾ ಅಭಿಮಾನಿಗಳು ನಾನಾ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಹೌದು, ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಏರಿದ್ದು, ಅಮ್ಮನ ಅಭಿಮಾನಿಗಳು ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿರುವಾಗಲೇ ಇಲ್ಲೊಬ್ಬ 61 ವರ್ಷದ ಆಟೋ ಚಾಲಕ ಪ್ರಯಾಣಿಕರಿಂದ ಕೇವಲ 1ರೂ. ಬಾಡಿಗೆ ಪಡೆದು ವಿಭಿನ್ನ ರೀತಿಯಲ್ಲಿ ಅಮ್ಮನ ಗೆಲುವನ್ನು ಸಂಭ್ರಮಿಸಿದ್ದಾರೆ.

ಒಂದು ದಿನದಲ್ಲಿ 102 ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಒಟ್ಟು 102ರೂ. ಸಂಪಾದಿಸಿದ್ದಾರೆ ಜಯಲಲಿತಾ ಅಭಿಮಾನಿ ಆರ್. ಎಂ. ಮತಿವಣನ್. ಈ ಬಗ್ಗೆ ಅವರು ಉತ್ತರಿಸುವುದು ಹೀಗೆ, ‘ನಾನು ತಿಂಡಿ, ಉಟವನ್ನು ಬಿಟ್ಟು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಪ್ರಯಾಣಿಕರು ಹೇಳಿದ ಸ್ಥಳಕ್ಕೆ 1.ರೂ ಟೋಕನ್ ಶುಲ್ಕ ಮಾತ್ರ ಪಡೆದು ಜನರ ಸೇವೆ ಮಾಡುವ ಮೂಲಕ ಅಮ್ಮನ ಗೆಲುವನ್ನು ಸಂಭ್ರಮಿಸಲು ತೀರ್ಮಾನಿಸಿದೆ’ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

1975ರಿಂದ ಪಕ್ಷದ ಕಾರ್ಯಕರ್ತರಾಗಿರುವ ಮತಿವಣನ್ 41 ವರ್ಷದಿಂದ ಕೊಯಮತ್ತೂರು ನಗರದಲ್ಲಿ ಅಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

Comments are closed.