ಮನೋರಂಜನೆ

ಕೇಂದ್ರ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪ್ರಧಾನಿ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್

Pinterest LinkedIn Tumblr

modi-amithab

ನವದೆಹಲಿ: ಎನ್ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಸಂಭ್ರಮ ಇಂಡಿಯಾ ಗೇಟ್ ಆವರಣದಲ್ಲಿ ಶನಿವಾರ ಸಂಪನ್ನಗೊಳ್ಳಲಿದ್ದು, ಈ ಸಂದರ್ಭ ಖ್ಯಾತ ಬಾಲಿವುಡ್ ನಟ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಜತೆ ಬಚ್ಚನ್ ಉಪಸ್ಥಿತಿ ವಿಶೇಷ ತಾರಾ ಮೆರುಗು ನೀಡಲಿದೆ.

ಪ್ರಧಾನಿ ಮೋದಿ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಈ ಸಂದರ್ಭ ಸರ್ಕಾರದ ಸಾಧನೆ, ನೂತನ ಯೋಜನೆ, ಮುಂದಿನ ಗುರಿ ಇತ್ಯಾದಿ ಬಗ್ಗೆ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಚ್ಚನ್ ಅವರಿಗೆ ಮೋದಿ ಈಗಾಗಲೇ ಅಧಿಕೃತ ಆಹ್ವಾನ ನೀಡಿದ್ದು, ಅವರು ಆಗಮಿಸಲು ಸಮ್ಮತಿಸಿದ್ದಾರೆ. ಮೋದಿ ಅವರ ಇಡೀ ಕ್ಯಾಬಿನೆಟ್ ಸಮಾರಂಭದಲ್ಲಿ ಹಾಜರಿರಲಿದೆ ಎಂದು ಮೂಲಗಳು ತಿಳಿಸಿವೆ.

ಸಂಜೆ 5 ರಿಂದ ರಾತ್ರಿ 10 ರ ವರೆಗೆ 5 ತಾಸು ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೂರದರ್ಶನ ನೇರ ಪ್ರಸಾರ ಮಾಡಲಿದೆ.

‘ದೇಶ್ ಬದಲ್ ರಹಾ ಹೈ ’ ಎಂಬುದು ಇಡೀ ಕಾರ್ಯಕ್ರಮದ ಥೀಮ್ ಸಾಂಗ್ ಆಗಿ ಹೊರ ಹೊಮ್ಮಲಿದೆ. ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Comments are closed.