ಮನೋರಂಜನೆ

ಅಮಿತಾಭ್ ಬಚ್ಚನ್ ಟ್ವಿಟ್ಟರ್​ನಲ್ಲಿ ಬರೋಬರಿ 2.1 ಕೋಟಿ ಅಭಿಮಾನಿಗಳು !

Pinterest LinkedIn Tumblr

amithab

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್ ಖಾತೆಗೆ 21 ದಶಲಕ್ಷ (2.1 ಕೋಟಿ) ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ಮೈಲುಗಲ್ಲು ದಾಟಿದ್ದಕ್ಕಾಗಿ ಬಚ್ಚನ್ ಅವರು ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ ಮತ್ತು ಶೀಘ್ರದಲ್ಲೇ 2.5 ಕೋಟಿ ಅಭಿಮಾನಿಗಳ ಗುರಿ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಶೋಲೆ’, ‘ದೀವಾರ್’ ಮತ್ತು ‘ಪಿಕು’ ಇತ್ಯಾದಿ ಹಿಟ್ ಚಿತ್ರಗಳನ್ನು ನೀಡಿರುವ 73ರ ಹರೆಯದ ನಟ, 2.1 ಕೋಟಿ ಅಭಿಮಾನಿಗಳನ್ನು ಗಳಿಸಿದ ಸುದ್ದಿಯನ್ನು ಟ್ವಿಟ್ಟರ್ ಹಾಗೂ ತಮ್ಮ ಅಧಿಕೃತ ಬ್ಲಾಗ್ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ.

‘21 ಮಿಲಿಯನ್ ಅಭಿಮಾನಿಗಳು.. ಇದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು… 25 ಮಿಲಿಯನ್ ಸಮೀಪ ಬರುತ್ತಿದ್ದೇವೆ ! ಬಾಆಆಆಆಡ್ಡೂಂಂಂಂಬಾಆಆಆ.’ ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.

‘ಟ್ವಿಟ್ಟರ್ನಲ್ಲಿ 21 ಮಿಲಿಯನ್ ಅಭಿಮಾನಿಗಳು. ಬ್ಲಾಗ್ ಮತ್ತು ವಿಸ್ತರಿತ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ’ ಎಂದು ತಮ್ಮ ಬ್ಲಾಗ್ನಲ್ಲಿ ಬಿಗ್ ಬಿ ಬರೆದಿದ್ದಾರೆ.

Comments are closed.