ರಾಷ್ಟ್ರೀಯ

ಕುಸಿದ ಸೇತುವೆ; ಪವಾಡ ಸದೃಶವಾಗಿ ಪಾರಾದರು ಬಸ್‍ನಲ್ಲಿದ್ದ ಪ್ರಯಾಣಿಕರು

Pinterest LinkedIn Tumblr

bus aac

ಜುನಾಘಡ: ಅಪಘಾತಕ್ಕೀಡಾದ ಬಸ್ನಿಂದ ಪವಾಡ ಸದೃಶ ಎನ್ನುವಂತೆ ಪ್ರಯಾಣಿಕರು ಪಾರಾದ ಘಟನೆ ಗುಜರಾತ್ನ ಜುನಾಘಡ ಎನ್ನುವಲ್ಲಿ ನಡೆದಿದೆ.

ಬಸ್ ಇನ್ನೇನು ಸೇತುವೆಯ ಮೇಲಿಂದ ದಾಟಬೇಕು ಎನ್ನುವಷ್ಟರಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಚಾಲಕನ ಸಮಯಪ್ರಜ್ಞೆಯಿಂದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಇನ್ನೆರಡು ಅಡಿ ಹಿಂದಕ್ಕೇ ಉಳಿದಿದ್ದರೆ ಸೇತುವೆಯಿಂದ ಕೆಳಕ್ಕುರುತ್ತಿತ್ತು. ಘಟನೆಯ ಬಳಿಕ ಬಸ್ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.