ರಾಷ್ಟ್ರೀಯ

ಕೈ ಇಲ್ಲದಿದ್ದರೂ ಕಾಲಿನಿಂದಲೇ ಪರೀಕ್ಷೆ ಬರೆದು ಶೇ.71 ಅಂಕ ಪಡೆದು ಎಲ್ಲರನ್ನು ಬೆರಗಾಗುವಂತೆ ಮಾಡಿದ ಪೋರ !

Pinterest LinkedIn Tumblr

ajay12

ಆಗ್ರಾ: ಹುಟ್ಟಿದಾರಭ್ಯ ಈತನಿಗೆ ಎರಡೂ ಕೈ ಇಲ್ಲ.ಆದರೆ ಭರಪೂರ ಜೀವನೋತ್ಸಾಹ ನೋಡಿದರೆ ಎಂಥವರಿಗೂ ಬೆರಗಾಗುತ್ತದೆ. ತನ್ನ ಕಾಲುಗಳನ್ನೇ ಕೈಯನ್ನಾಗಿ ಮಾಡುಕೊಂಡು ದೈನಂದಿನ ಎಲ್ಲ ಕೆಲಸವನ್ನೂ ಅಚ್ಚುಕಟ್ಟಾಗಿ ಈತ ನಿರ್ವಹಿಸುತ್ತಾನೆ. ಮಾತ್ರವಲ್ಲ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 71.8. ಅಂಕ ಪಡೆದು ಉತ್ತೀರ್ಣನಾಗುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾನೆ.

ajay13

ಹೌದು. ಈ ಪೋರನ ಹೆಸರು ಅಜಯ್ ಕುಮಾರ್(16). ಉತ್ತರ ಪ್ರದೇಶದ ಮೇಯಿನ್ಪುರಿ ಜಿಲ್ಲೆ ಭೋಗೋನ್ ಗ್ರಾಮದವ. ಕಾಲು ಬೆರಳುಗಳ ಸಂದಿಯಲ್ಲಿ ಲೇಖನಿ ಸಿಕ್ಕಿಸಿಕೊಂಡು ಬರೆಯಲು ಆರಂಭಿಸಿದನೆಂದರೆ ಕೈ ಇರುವವರೂ ನಾಚಿಕೊಳ್ಳಬೇಕು. ಈತ ಎಸ್.ಆರ್. ಇಂಟರ್ ಕಾಲೇಜಿನಲ್ಲಿ ಉತ್ತರ ಪ್ರದೇಶ ಬೋರ್ಡ್ನ 10ನೇ ತರಗತಿ ಪರೀಕ್ಷೆ ಬರೆದು 600ಕ್ಕೆ 431 ಅಂಕ ಗಿಟ್ಟಿಸಿ ಈಗ ಎಲ್ಲರ ಗಮನ ಸೆಳೆದಿದ್ದಾನೆ.

ajay1

ಎಂಜಿನಿಯರ್ ಆಗುವ ಗುರಿ

ಮುಂದಿನ ಪರೀಕ್ಷೆಗಳಲ್ಲಿ ಶೇ. 80ಕ್ಕೂ ಹೆಚ್ಚು ಅಂಕ ಗಳಿಸುತ್ತೇನೆ ಎಂದು ಅತ್ಯಂತ ಭರವಸೆಯಿಂದ ಹೇಳುವ ಈತ ಎಂಜಿನಿಯರ್ ಆಗುವ ಗುರಿ ತನಗಿದೆ ಎನ್ನುತ್ತಾನೆ. ನನಗಿರುವ ವೈಕಲ್ಯ ನೋಡಿ ಅನೇಕರು ಪ್ರೋತ್ಸಾಹಿಸಿದರು, ಕೆಲವರು ಹಿಂದೆ -ಮುಂದೆ ಆಡಿಕೊಂಡು ನಕ್ಕರು. ಗೇಲಿ ಮಾಡಿದರು. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗಿರುವ ಖಚಿತ ಗುರಿ ಮತ್ತು ಉತ್ಸಾಹದ ಮುಂದೆ ಎಲ್ಲವೂ ಗೌಣ ಎನ್ನುತ್ತಾನೆ ಅಜಯ್.

ಜನ್ಮತಹಃ ವೈಕಲ್ಯ ಪಡೆದ ಈತ ಹೇಗೆ ಜೀವನ ನಿರ್ವಹಿಸುತ್ತಾನೆ ಎಂದು ಚಿಂತಾಕ್ರಾಂತರಾಗಿದ್ದೆವು. ಕಾಲಿನ ಬೆರಳುಗಳ ನಡುವೆ ಪೆನ್ಸಿಲ್ ಸಿಕ್ಕಿಸಿ ಮರಳಿನ ಮೇಲೆ ಗೆರೆ ಎಳೆಯುವ ಅಭ್ಯಾಸ ಮಾಡಿಸಿದೆವು. ಕ್ರಮೇಣ ಆತನ ವ್ಯಾಸಂಗಕ್ಕೆ ಇದು ಪೂರಕವಾಯಿತು ಎಂದು ಸಂಭ್ರಮದಿಂದ ಹೇಳುತ್ತಾರೆ ಈತನ ತಂದೆ ದಯಾರಾಮ್ ಶಾಲೆ ಮತ್ತು ಅಧ್ಯಯನದಲ್ಲಿ ಅಪ್ಡೇಟ್ ಇದ್ದು ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಅಜಯ್ ತನ್ನ ತಾಯಿ ಮೀರಾ ನೀಡಿದ ಭರವಸೆ ಮತ್ತು ಪ್ರೋತ್ಸಾಹಗಳನ್ನು ವಿನಮ್ರವಾಗಿ ನೆನೆಯುತ್ತಾನೆ.

Comments are closed.