ಅಂತರಾಷ್ಟ್ರೀಯ

ಆತ್ಮಹತ್ಯೆ ಮಾಡಿಕೊಳ್ಳಲು ಮೃಗಾಲಯದ ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿ ! ಆತನನ್ನು ಕಾಪಾಡುದಕ್ಕೆ ಗುಂಡಿಟ್ಟು 2 ಸಿಂಹಗಳ ಹತ್ಯೆ

Pinterest LinkedIn Tumblr

5

ಸ್ಯಾಂಟಿಯಾಗೊ (ಚಿಲಿ): ಆತ್ಮಹತ್ಯೆಯ ಯತ್ನವಾಗಿ ಮೃಗಾಲಯದ ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯೊಬ್ಬನ ರಕ್ಷಣೆಗಾಗಿ ಎರಡು ಸಿಂಹಗಳನ್ನು ಕೊಂದ ದಾರುಣ ಘಟನೆ ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಶನಿವಾರ ನಸುಕಿನಲ್ಲಿ ಘಟಿಸಿದೆ.

ಗಾಯಗೊಂಡಿರುವ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4

3

2

1

20ರ ಹರೆಯದ ಈ ವ್ಯಕ್ತಿ, ಸಂದರ್ಶಕರು ಕಿಕ್ಕಿರಿದಿದ್ದ ವೇಳೆಯಲ್ಲಿ ದಿಢೀರನೆ ತನ್ನ ಬಟ್ಟೆಗಳನ್ನು ಕಳಚಿ ಸಿಂಹಗಳಿದ್ದ ಬೋನಿನೊಳಕ್ಕೆ ಜಿಗಿದ. ನಗ್ನ ವ್ಯಕ್ತಿ ಬೋನಿನೊಳಗೆ ಬೀಳುತ್ತಲೇ ಸಿಂಹಗಳ ಸಮೂಹ ಆತನ ಮೇಲೆರಗಿ ಕಚ್ಚಿ ಎಳೆದಾಡತೊಡಗಿದವು. ಈ ಭಯಾನಕ ದೃಶ್ಯದಿಂದ ನೆರೆದಿದ್ದವರು ದಿಗ್ಮೂಢರಾದರು. ಸಿಂಹಗಳನ್ನು ತೆಪ್ಪಗಾಗಿಸಲು ಅರಿವಳಿಕೆ ತಜ್ಞರ ಅಭಾವ ಕಾರಣ ಸಿಬ್ಬಂದಿ ಒಂದು ಸಿಂಹ ಹಾಗೂ ಸಿಂಹಿಣಿಯನ್ನು ಕೊಂದು ಹಾಕಿದರು ಎಂದು ಸ್ಯಾಂಟಿಯಾಗೊ ಮೆಟ್ರೊಪಾಲಿಟನ್ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯ ಪ್ಯಾಂಟ್ ಕಿಸೆಯಲ್ಲಿ ಆತ್ಮಹತ್ಯಾ ಟಿಪ್ಪಣಿ ಲಭಿಸಿದೆ ಎಂದು ಅವರು ಹೇಳಿದ್ದಾರೆ.

Comments are closed.