ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ದುರಂತಕ್ಕೆ ಆರು ವರ್ಷ : ಮಹಾದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆ

Pinterest LinkedIn Tumblr

Air_Crsh_Tribute_1

ಮಂಗಳೂರು, ಮೇ 22: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ನಡೆದ ಏರ್ ಇಂಡಿಯಾ ವಿಮಾನ ಮಹಾದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ರವಿವಾರ ಕೂಳೂರಿನ “ಸ್ಮಾರಕ ಪಾರ್ಕ್”ನಲ್ಲಿ ನಡೆಯಿತು.

ಈ ಸಂದರ್ಭ ವಿಮಾನ ಮಹಾದುರಂತದಲ್ಲಿ ಸಾವನ್ನಪ್ಪಿ ಅಗಲಿದ ಪ್ರಯಾಣಿಕರ ಅತ್ಮಕ್ಕೆ ಶಾಂತಿ ಕೋರಿ ಮೌನಪ್ರಾರ್ಥನೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಅಗಲಿದ ಪ್ರಯಾಣಿಕರ ನೆನಪಿಗೆ ಸ್ಮಾರಕ ಪಾರ್ಕ್ ನಲ್ಲಿ ಗಿಡಗಳನ್ನು ನೆಡಲಾಯಿತು.

Air_Crsh_Tribute_2 Air_Crsh_Tribute_3 Air_Crsh_Tribute_4 Air_Crsh_Tribute_5 Air_Crsh_Tribute_6 Air_Crsh_Tribute_7 Air_Crsh_Tribute_8

ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ,ಮಂಗಳೂರು ವಿಮಾನ ದುರಂತ ದೇಶದಲ್ಲಿ ಸಂಭವಿಸಿದ ಭೀಕರ ದುರಂತವಾಗಿದೆ. ದುರಂತದಲ್ಲಿ ಮಡಿದವರ ನೆನಪಿಗಾಗಿ ಎನ್ ಎಂ ಪಿ ಟಿ ಯ ಜಾಗದಲ್ಲಿ ಎನ್ ಎಂಪಿಟಿಯವರು ಈ ಸ್ಮಾರಕ ಪಾರ್ಕ್ ಆನು ನಿರ್ಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದುರಂತದಲ್ಲಿ ಮಡಿದವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ, ಜೊತೆಗೆ ದುರಂತದಲ್ಲಿ ಪ್ರಾಣ ತೆತ್ತ ಪ್ರಯಾಣಿಕರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.

Air_Crsh_Tribute_9 Air_Crsh_Tribute_10 Air_Crsh_Tribute_11 Air_Crsh_Tribute_12

ಶ್ರದ್ಧಾಂಜಲಿ ಸಲ್ಲಿಸಿ, ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಅವರು ಮಾತನಾಡಿ, ವಿಮಾನ ದುರಂತದಲ್ಲಿ ಸಾವನ್ನಪಿದ 158 ಮಂದಿಯಲ್ಲಿ 12 ಮಂದಿಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಗುರುತಿಸಲಾಗದ ಮೃತದೇಹವನ್ನು ಈ ಜಾಗದಲ್ಲಿ ಅಂತ್ಯಸಂಸ್ಕಾರಗೈದ ಹಿನ್ನೆಲೆಯಲ್ಲಿ ಎನ್ ಎಂಪಿಟಿಯವರಲ್ಲಿ ವಿನಂತಿಸಿ 60 ಲಕ್ಷ ವೆಚ್ಚದಲ್ಲಿ ಸ್ಮಾರಕ ಪಾರ್ಕ್ ನಿರ್ಮಿಸಲಾಗಿದೆ. ಇನ್ನು 9 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಸಗುವುದು. ಏರ್ ಪೋರ್ಟ್ ಅಥಾರಿಟಿ ಅಥವಾ ಏರ್ ಇಂಡಿಯಾರವರಲ್ಲಿ ಇದರ ನಿರ್ವಹಣೆ ಮಾಡಲು ವಿನಂತಿಸಲಾಗುವುದು. ಅವರು ಒಪ್ಪದಿದ್ದರೆ ಮನಪಾಕ್ಕೆ ವಿನಂತಿಸಲಾಗುವುದು. ವಿಮಾನ ದುರಂತದಲ್ಲಿ ಸಾವನ್ನಪ್ಪಿದ 158 ಮಂದಿಯ ಹೆಸರನ್ನು ಸ್ಮಾರಕ ದಲ್ಲಿ ನಮೂದಿಸಲಾಗುವುದು. ಈ ಸ್ಥಳದಲ್ಲಿ ಸಂತ್ರಸ್ತ ಕುಟುಂಬಗಳು ಗಿಡಗಳನ್ನು ನೆಡಬಹುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಡಿಸಿಪಿ ಶಾಂತರಾಜು, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಕೃಷ್ಙನ್, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಕಮೀಷನರ್ ಗೋಪಾಲಕೃಷ್ಣ , ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Comments are closed.